ಸೇನೆಗೆ ಸೇರಿ ಪತಿಯ ಗೌರವ ಹೆಚ್ಚಿಸಿದ ಹುತಾತ್ಮ ಯೋಧನ ಪತ್ನಿ!

ಚೆನ್ನೈ : 2019ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಲ್‌ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈಗ ಅವರ ಪತ್ನಿ ನಿತಿಕಾ ಕೌಲ್‌ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ಪತಿಯ ಬಲಿದಾನಕ್ಕೆ ಅತ್ಯುತ್ತಮ…

ಚೆನ್ನೈ : 2019ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಲ್‌ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈಗ ಅವರ ಪತ್ನಿ ನಿತಿಕಾ ಕೌಲ್‌ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ಪತಿಯ ಬಲಿದಾನಕ್ಕೆ ಅತ್ಯುತ್ತಮ ಗೌರವ ನೀಡಿದ್ದಾರೆ ಎಂದು ಶ್ಲಾಘಿಸಿ ಪ್ರೊ ಉಧಮ್‌ಪುರ್‌ ವಿಡಿಯೊ ಪೋಸ್ಟ್‌ ಮಾಡಿದ್ದಾರೆ.

2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ, ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಲ್‌ ಅವರ ಪತ್ನಿ 29 ವರ್ಷದ ನಿತಿಕಾ ಕೌಲ್‌ ಪತಿಯ ಶೌರ್ಯದ ಹಾದಿಯಲ್ಲೇ ನಡೆಯಲು ನಿರ್ಧರಿಸಿ, ಸೇನೆಗೆ ಸೇರುವ ಮೂಲಕ ಪತಿಗೆ ಗೌರವ ನಲ್ಲಿಸಿದ್ದಾರೆ.

ಪತಿಯ ಶೌರ್ಯದ ಹಾದಿಯಲ್ಲೇ ನಡೆಯಲು ನಿರ್ಧರಿಸಿದ
ನಿತಿಕಾ ಕೌಲ್‌ ಒಂದು ವರ್ಷ ತಮಿಳುನಾಡಿನಲ್ಲಿ ಕಠಿಣ ತರಬೇತಿ ಮುಗಿಸಿ ಶನಿವಾರ ಸೇನೆಯ ಸಮವಸ್ತ್ರ ಧರಿಸಿದ್ದು, ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನೆಯ ಉತ್ತರ ಕಮಾಂಡ್‌ ವಿಭಾಗದ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ವೈ ಕೆ ಜೋಶಿ ಅವರು ನಿತಿಕಾರ ಹೆಗಲಿನ ಪಟ್ಟಿಗೆ ಸ್ಟಾರ್‌ಗಳನ್ನು ಜೋಡಿಸಿದರು.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.