ದಾವಣಗೆರೆ: ಈಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರ ಭುಗಿಲೆದ್ದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆ ಜಿಲ್ಲೆಯ ಹರಿಹರ ಶಾಸಕ ರಾಮಪ್ಪ ಅವರ ಪುತ್ರಿ ಮದುವೆಗೆ ತೆರಳಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಸೇರಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದಾರೆ.
ಇದನ್ನು ಕಂಡ ಸಿದ್ದರಾಮಯ್ಯ, ಹೇ ಸುಮ್ನಿರ್ರಪ್ಪ ಎಂದು ಸುಮ್ಮನಿರಿಸಿದ್ದಾರೆ. ಕೊರೋನಾ ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಮದುವೆಗೆ ಕೇವಲ 40 ಮಂದಿ ಅಷ್ಟೇ ಭಾಗಿಯಾಗಬೇಕೆಂಬ ನಿಯಮಾವಳಿ ರೂಪಿಸಿದೆ. ಆದರೆ ಈ ನಿಯಮವನ್ನು ಮದುವೆಯಲ್ಲಿ ಸಂಪೂರ್ಣ ಉಲ್ಲಂಘಿಸಲಾಗಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.