IRCTC Ticket Booking : ರೈಲಿನಲ್ಲಿ ಟಿಕೆಟ್ ಬುಕಿಂಗ್ ಮಾಡುವ ನಿಯಮದಲ್ಲಿ ಬದಲಾವಣೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ನ.1ರಿಂದ ಹೊಸ ಮಾರ್ಗಸೂಚಿ ಅನ್ವಯವಾಗಲಿದ್ದು, ಮುಂಗಡ ರೈಲು ಟಿಕೆಟ್ ಕಾಯ್ದಿರಿಸುವಿಕೆಗೆ ಇದ್ದ ಸಮಯದ ಮಿತಿಯನ್ನು ಕಡಿಮೆ ಮಾಡಿರುವುದಾಗಿ ಭಾರತೀಯ ರೈಲ್ವೇ ಇಲಾಖೆ ಘೋಷಿಸಿದೆ.
IRCTC Ticket Booking : ಹೊಸ ನಿಯಮ ಏನು?
ಈ ಮೊದಲು ನೀವು ಯಾವಾಗ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಿರೋ, ಅದರ 120 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಆದರೆ, ಈಗ ಹೊಸ ನಿಯಮದ ಪ್ರಕಾರ ಕೇವಲ 60 ದಿನಗಳ ಮುಂಚಿತವಾಗಿ ನೀವು ಬುಕ್ ಮಾಡಬಹುದಾಗಿದೆ.
IRCTC Ticket Booking : ಯಾವಾಗ ಜಾರಿಗೆ?
ಈ ಹೊಸ ಬುಕ್ಕಿಂಗ್ ನಿಯಮವು ನ. 1ರಿ೦ದ ಜಾರಿಗೆ ಬರಲಿದೆ. ಒಂದೊಮ್ಮೆ ನ. 1ಕ್ಕೂ ಮುನ್ನ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರೆ ಈ ನಿಯಮಗಳು ಅನ್ವಯಿಸುವುದಿಲ್ಲ ಎ೦ದೂ ಇಲಾಖೆ ಸ್ಪಷ್ಟಪಡಿಸಿದೆ.
ಬದಲಾವಣೆ ಇಲ್ಲ
ಇನ್ನು, ವಿದೇಶಿ ಪ್ರವಾಸಿಗರಿಗೆ 365 ದಿನಗಳ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅಲ್ಲದೆ ಹಗಲಿನಲ್ಲಿ ಪ್ರಯಾಣಿಸುವ ತಾಜ್ ಎಕ್ಸ್‌ಪ್ರೆಸ್ ಮತ್ತು ಗೋಮತಿ ಎಕ್ಸ್‌ಪ್ರೆಸ್ ರೈಲುಗಳ ಬುಕಿಂಗ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಏಕೆಂದರೆ ಈ ರೈಲುಗಳಲ್ಲಿ ಈಗಾಗಲೇ 60 ದಿನಗಳ ಬುಕ್ಕಿಂಗ್ ನಿಯಮ ಜಾರಿಯಲ್ಲಿದೆ.
ಹೊಸ ನಿಯಮದ ಪ್ರಯೋಜನ
ನಿಯಮಿತವಾಗಿ ಪ್ರಯಾಣಿಸುವ ಲಕ್ಷಾಂತರ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಈ ನಿಯಮವು ದೊಡ್ಡ ಪರಿಹಾರವನ್ನು ತರುತ್ತದೆ. ಹೆಚ್ಚು ಕಾಯದೆ ಟಿಕೆಟ್‌ಗಾಗಿ ಎರಡು ತಿಂಗಳು ಮುಂಚಿತವಾಗಿ ಬುಕ್ ಮಾಡಿದರೆ ಸಾಕು. ಇದರೊಂದಿಗೆ ಟಿಕೆಟ್ ರದ್ದತಿಯೂ ಕಡಿಮೆಯಾಗಬಹುದು.
ಐಆರ್‌ಸಿಟಿಸಿಯಲ್ಲಿ ಎಐ ಬಳಕೆ
ರೈಲುಗಳಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಶೀಲಿಸಲು ಕೃತಕ ಬುದ್ದಿಮತ್ತೆಯನ್ನು ಬಳಸಲಾಗುತ್ತಿದೆ. ಎಐ ಬಳಸಿ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ರಿಸರ್ವೇಷನ್ ಚಾರ್ಟ್ ಸಿದ್ಧಪಡಿಸಲಾಗುತ್ತದೆ. ಇದರಿಂದ ಎರಡು ನಿಲ್ದಾಣಗಳ ನಡುವೆ ಖಾಲಿ ಇರುವ ಸೀಟುಗಳನ್ನು ಗುರುತಿಸಲು ಸಾಧ್ಯವಾಗುವುದರಿಂದ ಅದನ್ನು ವೇಲ್ಡಿಂಗ್‌ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ನೀಡಲಾಗುತ್ತಿದೆ.