New rules | ಹೊಸ ವರ್ಷದಿಂದ ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಬದಲಾಗಲಿದ್ದು, ಇಂದಿನಿಂದ ದೇಶಾದ್ಯಂತ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಜಿಎಸ್‌ಟಿಯಲ್ಲಿ ಹೊಸ ವರ್ಷಕ್ಕೆ ಹೊಸ ನಿಯಮಗಳು ಜಾರಿಗೆ ಬರಲಿದ್ದು, ರೈತರಿಗೆ ಖಾತರಿಯಿಲ್ಲದ ಸಾಲಗಳ ನಿಯಮ, EPFO ಪಿಂಚಣಿದಾರರಿಗೆ, ಕಾರು, UPI 123Pay ಪಾವತಿಯ ನಿಯಮ, ಎಲ್‌ಪಿಜಿ ಸಿಲಿಂಡರ್ ದರ ಏರಿಕೆ, ಎಫ್‌ಡಿ ನಿಯಮಗಳಲ್ಲಿ ಬದಲಾವಣೆಯಾಗಲಿದೆ.
ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ ಹಾಗೂ ಇ-ವೇ ಬಿಲ್ ನಿರ್ಬಂಧಗಳಲ್ಲಿ ಬದಲಾವಣೆ
2025ರ ಜನವರಿ 1ರಿಂದ (ಇಂದಿನಿಂದ) ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (MFA) ಮೂಲಕ GST ಪೋರ್ಟಲ್‌ಗಳಲ್ಲಿ ಭದ್ರತೆ ಹೆಚ್ಚಿಸುವ ಸಲುವಾಗಿ ಎಲ್ಲಾ ತೆರಿಗೆದಾರರಿಗೆ ಬಹು ಅಂಶದ ದೃಢೀಕರಣ ವ್ಯವಸ್ಥೆ ಕಡ್ಡಾಯ ಮಾಡಲಾಗುತ್ತದೆ. ಇ-ವೇ ಬಿಲ್‌ಗಳನ್ನು ಈಗ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳ ಮೇಲೆ ಮಾತ್ರ ರಚಿಸಲಾಗುವುದಲ್ಲದೆ, ವಂಚನೆಗಳನ್ನು ಕಡಿಮೆ ಮಾಡಲು ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ.
ಇದನ್ನೂ ಓದಿ: New Year 2025 | ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಿದರೆ ವರ್ಷಪೂರ್ತಿ ಸಂತೋಷ
ಅಮೇಜಾನ್ ಪ್ರೈಮ್ ಹಾಗೂ ಕಾರುಗಳ ಬೆಲೆಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ?
ಅಮೆಜಾನ್ ಇಂಡಿಯಾ ತನ್ನ ಪ್ರಧಾನ ಸದಸ್ಯತ್ವ ನಿಯಮಗಳನ್ನು ಇಂದಿನಿಂದ ಬದಲಾಯಿಸಲಿದ್ದು, ಈಗ ಪ್ರೈಮ್ ವಿಡಿಯೊವನ್ನು ಒಂದು ಖಾತೆಯಿಂದ 2 ಟಿವಿಗಳಲ್ಲಿ ಮಾತ್ರ ಸ್ಟ್ರೀಮ್ ಮಾಡಬಹುದಾಗಿದ್ದು, ಟಿವಿಯಲ್ಲಿ ಇದಕ್ಕಿಂತ ಹೆಚ್ಚಿನದನ್ನು ಸ್ಟ್ರೀಮ್ ಮಾಡಲು, ಹೆಚ್ಚುವರಿ ಚಂದಾದಾರಿಕೆಯ ಅಗತ್ಯವಿದೆ. ಮೊದಲ ಐದು ಸಾಧನಗಳಿಗೆ ಯಾವುದೇ ಮಿತಿಯಿಲ್ಲ. ಇನ್ನು, ಕಾರುಗಳ ಬೆಲೆಯಲ್ಲಿ ಶೇ. 2ರಿಂದ ಶೇ. 4ರಷ್ಟು ಏರಿಕೆಯಾಗಲಿದ್ದು,. ಹ್ಯುಂಡೈ, ಮಹೀಂದ್ರಾ, ಹೋಂಡಾ,ಮಾರುತಿ ಸುಜುಕಿ, ಟಾಟಾ ಮೋಟರ್ಸ್ ಸೇರಿ ಪ್ರಮುಖ ಕಂಪನಿಗಳು ಬೆಲೆ ಏರಿಕೆ ಮಾಡಲಿವೆ.
2025ರಲ್ಲಿ ಆನ್‌ಲೈನ್‌ನಲ್ಲಿ ಥಾಯ್ಲೆಂಡ್ ಇ – ವೀಸಾದಲ್ಲಿ ಬದಲಾವಣೆಯಾಗಲಿದೆ
ವಿಶ್ವದ ಯಾವುದೇ ದೇಶದ ಸಂದರ್ಶಕರು ಅಧಿಕೃತ ವೆಬ್‌ಸೈಟ್ www.thaievisa.go.th ಮೂಲಕ ಥಾಯ್ಲೆಂಡ್ ಇ – ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಇ – ವೀಸಾ ವ್ಯವಸ್ಥೆಯು ಈ ಹಿಂದೆ ಕೆಲವು ಪ್ರದೇಶಗಳ ಪ್ರಯಾಣಿಕರಿಗೆ ಮಾತ್ರವೇ ಲಭ್ಯವಿತ್ತು.
ಈಗ ಇತರ ಪ್ರಜೆಗಳು ಸೇರಿದಂತೆ ಭಾರತೀಯರು ಎಲ್ಲಿಂದಲಾದರೂ ಆನ್‌ಲೈನ್‌ನಲ್ಲಿ ಇ – ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರವಾಸಿಗರು ಈಗ ಸುಲಭವಾಗಿ ಥಾಯ್ಲೆಂಡ್ಗೆ ಪ್ರಯಾಣ ಬೆಳೆಸಬಹುದು. ಜೊತೆಗೆ ಅಮೆರಿಕದ ವೀಸಾ ನಿಯಮಗಳಲ್ಲೂ ಬದಲಾಣೆಗಳು ಜಾರಿಗೆ ಬರುತ್ತವೆ.
ಇದನ್ನೂ ಓದಿ: Richest Chief Minister | ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ CM ; ಕೇವಲ ₹15 ಲಕ್ಷ ಆಸ್ತಿ ಇರುವ ಮಮತಾ ಬ್ಯಾನರ್ಜಿ ಅತಿ ಬಡ CM
ಇಂದಿನಿಂದ ಈ ಫೋನ್‌ಗಳಲ್ಲಿ ವಾಟ್ಸ್ ಆಪ್ ನಿಷೇಧ
ಇಂದಿನಿಂದ ಹಳೆಯ ಹಲವು Android ಫೋನ್‌ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ. ಹೌದು, Samsung Galaxy S3, Galaxy S3, Galaxy S4 Mini, Sony Xperia Z, Xperia T, LG Optimus G, HTC One X, One X Plus, Nexus 4, Moto G, Moto E 2014 ನಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ. ಬ್ಯಾಕಪ್ ಚಾಟ್ ಮತ್ತು ಡೇಟಾವನ್ನು ಗೂಗಲ್ ಡ್ರೈವ್‌ಗೆ ವರ್ಗಾಹಿಸುವ ಸೌಲಭ್ಯ ಒದಗಿಸಲಿದ್ದು, ಇಂದಿನ ಮೊದಲು ವಾಟ್ಸ್ಆ್ಯಪ್ ಬ್ಯಾಕಪ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಶಾಶ್ವತವಾಗಿ ಡೇಟಾ ಅಳಿಸುತ್ತದೆ.
LPG ಸಿಲಿಂಡರ್ ಹಾಗೂ ಟೆಲಿಕಾಂನಲ್ಲಿ ಇಂದಿನಿಂದ ಹೊಸ ನಿಯಮಗಳು
ಇಂದಿನಿಂದ ದೇಶಾದ್ಯಂತ ದೂರಸಂಪರ್ಕ ಇಲಾಖೆ (ರೈಟ್ ಆಫ್ ವೇ) ನಿಯಮಗಳು ಜಾರಿಗೆ ಬರಲಿದ್ದು, ಭೂಗತ ಸಂವಹನ ಮೂಲಸೌಕರ್ಯಗಳ ಸ್ಥಾಪನೆ ಮತ್ತು ನಿರ್ವಹಣೆ ಇನ್ಮುಂದೆ ಸುಲಭವಾಗಲಿದೆ. ಹೀಗಾಗಿ ಜಿಯೋ, ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್‌ನಂತಹ ಟೆಲಿಕಾಂ ಕಂಪನಿಗಳ ಸೇವೆಗಳಲ್ಲಿ ಭಾರಿ ಸುಧಾರಣೆ ಕಾಣುವ ಸಾಧ್ಯತೆಗಳಿದ್ದು, ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮುಂದಿನ ತಿಂಗಳು ಕೂಡ ಏರಿಕೆಯಾಗುವ ಅಂದಾಜಿದೆ.
ಇದನ್ನೂ ಓದಿ: New rules | ಹೊಸ ವರ್ಷಕ್ಕೆ ಹೊಸ ರೂಲ್ಸ್; ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ
ರೈತರಿಗೆ ಖಾತರಿಯಿಲ್ಲದ ಸಾಲಗಳ ನಿಯಮದಲ್ಲೂ ಇಂದಿನಿಂದ ಯಿಂದ ಸಡಿಲ ಮಾಡಲಾಗುತ್ತದೆ
ಇಂದಿನಿಂದ ಆಗಲಿರುವ ಬದಲಾವಣೆಯು ರೈತರಿಗೂ ಸಂಬಂಧಿಸಿದ್ದು, ವರ್ಷದ ಮೊದಲ ದಿನದಿಂದ ರೈತರಿಗೆ ಆರ್‌ಬಿಐನಿಂದ ಖಾತರಿಯಿಲ್ಲದೆ 2 ಲಕ್ಷ ರೂವರೆಗೆ ಸಾಲ ಸಿಗಲಿದೆ. ಇತ್ತೀಚೆಗಷ್ಟೇ ಆರ್‌ಬಿಐ ರೈತರಿಗೆ ಖಾತರಿಯಿಲ್ಲದೆ ಸಾಲದ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು, ಇದರಿಂದಾಗಿ ಈಗ ಅವರು 1.6 ಲಕ್ಷದ ಬದಲಿಗೆ 2 ಲಕ್ಷದವರೆಗೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಕ್ರಮವು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲಗಳಿಗೆ ಸುಲಭ ಪ್ರವೇಶವನ್ನು ಒದಗಿಸುವ ನಿರೀಕ್ಷೆಯಿದೆ.
ಹೊಸ ವರ್ಷದಿಂದ ಎಫ್‌ಡಿಯ ಈ ನಿಯಮಗಳಲ್ಲಿ ಬದಲಾವಣೆಯಾಗಲಿದೆ
ಬ್ಯಾಂಕೇತರ ಹಣಕಾಸು ಕಂಪನಿಗಳು ಎನ್‌ಬಿಎಫ್‌ಸಿ ಮತ್ತು ಎಚ್‌ಎಫ್‌ಸಿ ಸೇರಿದಂತೆ ಎಫ್‌ಡಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಆರ್‌ಬಿಐ ಬದಲಾಯಿಸಿದೆ. ಈ ನಿಯಮಗಳು 2025 ಜನವರಿ 1 ರಿಂದ ಜಾರಿಗೆ ಬರುತ್ತವೆ. ಹೊಸ ನಿಯಮಗಳಲ್ಲಿ ಠೇವಣಿಗಳನ್ನು ತೆಗೆದುಕೊಳ್ಳುವುದು, ಜನರ ಠೇವಣಿಗಳನ್ನು ವಿಮೆ ಮಾಡುವುದು ಮತ್ತು ತುರ್ತು ಸಂದರ್ಭಗಳಲ್ಲಿ ಠೇವಣಿಗಳನ್ನು ಹಿಂದಿರುಗಿಸುವುದು, ಸುರಕ್ಷತೆ ಒದಗಿಸುವುದು, ಒಬ್ಬರಿಗಿಂತ ಹೆಚ್ಚಿನ ಜನರನ್ನು ನಾಮಿನಿಗಳನ್ನಾಗಿ ಮಾಡುವುದು ಸೇರಿ ಕೆಲ ನಿಯಮಗಳು ಇಂದಿನಿಂದ ಬದಲಾವಣೆ ಆಗಲಿವೆ.