new ration card: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವ ರಾಜ್ಯದ ಜನತೆಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಏಪ್ರಿಲ್ 1ರ ನಾಳೆಯಿಂದ ಹೊಸ ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಪೋರ್ಟಲ್ ಆರಂಭವಾಗಲಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ರಾಜ್ಯ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆ; ನೀರಾವರಿ ಘಟಕಗಳಿಗೆ ಸಹಾಯಧನ..!
ಹೌದು, ರಾಜ್ಯದ ನಾಗರಿಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ www.ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ರೇಷನ್ ಕಾರ್ಡ್‌ನಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.
new ration card ಅರ್ಜಿ ಸಲ್ಲಿಸುವುದು ಹೇಗೆ..?

ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಏಪ್ರಿಲ್ 1, 2024ಕ್ಕೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಜೊತೆಗೆ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರೆಗೂ ಕೂಡ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ.
ಇದನ್ನು ಓದಿ: ಏಪ್ರಿಲ್ 8ರಂದು ಸಂಪೂರ್ಣ ಸೂರ್ಯಗ್ರಹಣ..ಈ ದೇಶಗಳಲ್ಲಿ ಪೂರ್ಣ ಕತ್ತಲು; ಭಾರತದಲ್ಲಿ ಗೋಚರಿಸುತ್ತದೆಯೇ?
ಇನ್ನು, ನೀವು ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸುವವರು ಸಂಬಂದಿಸಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾಕೇಂದ್ರ ಗಳಿಗೆ ಹೋಗಿ ಸರಿಯಾದ ದಾಖಲೆಗಳನ್ನು ಕೊಟ್ಟು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ https://ahara.kar.nic.in/ ವೆಬ್ ಸೈಟ್ ಗೆ ಭೇಟಿ ನೀಡಬಹುದು.
new ration card ಬೇಕಾದ ದಾಖಲೆಗಳೇನು..?
- ಓಟರ್ ಐಡಿ,
- ಆಧಾರ್ ಕಾರ್ಡ್,
- ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಫೋಟೊ(ಪಾಸ್‌ಪೋರ್ಟ್ ಸೈಜ್),
- ಮೋಬೈಲ್ ನಂಬರ್,
- ಸ್ವಯಂ ಘೋಷಿತ ಪ್ರಮಾಣ ಪತ್ರ ಹೊಂದಿರಬೇಕು.
ಇದನ್ನು ಓದಿ: ಬಿಪಿಎಲ್ ಕಾರ್ಡ್ ಇದ್ದವರ ಖಾತೆಗೆ ಹಣ ಜಮಾ; ಸ್ಟೇಟಸ್ ಚೆಕ್ ಮಾಡಿ!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |