ಕೇಂದ್ರ ಆರೋಗ್ಯ ಇಲಾಖೆ ಸಿಗರೇಟ್, ತಂಬಾಕು ಉತ್ಪನ್ನದ ಪ್ಯಾಕೇಜಿಂಗ್ & ಲೇಬಲಿಂಗ್ ನಿಯಮ-2008ರಲ್ಲಿ ತಿದ್ದುಪಡಿ ಮಾಡಿದ್ದು, ಈ ನಿಯಮದಡಿ ಆಮದು ಮಾಡಿದ ತಂಬಾಕು ಉತ್ಪನ್ನದ ಪ್ಯಾಕ್ ಮೇಲೆ ‘ತಂಬಾಕು ಸೇವನೆ ಅತ್ಯಂತ ನೋವಿನ ಸಾವಿಗೆ ಕಾರಣವಾಗುತ್ತದೆ’ ಎಂಬ ಎಚ್ಚರಿಕೆ ಜತೆಗೆ ಹೊಸ ಚಿತ್ರದ ಮುದ್ರಣ ಕಡ್ಡಾಯ ಮಾಡಿದೆ.
ಸಿಗರೇಟ್ಸ್ ಆಂಡ್ ಟೊಬಾಕೋ ಪ್ರಾಡೆಕ್ಟ್ಸ್ (ಪ್ಯಾಕೇಜಿಂಗ್ ಆಂಡ್ ಲೇಬಲಿಂಗ್) ರೂಲ್ಸ್ 2008, ಎಂಬ ನಿಯಮಕ್ಕೆ 2022 ಜುಲೈ 21ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ತಿದ್ದುಪಡಿ 2022 ಡಿಸೆಂಬರ್ 1ರಿಂದ ಅನ್ವಯವಾಗಲಿದೆ. ಈ ಅಧಿಸೂಚನೆಯು http://www.mohfw.gov.in www.mohfw.gov.in ಮತ್ತು http://ntcp.nhp.gov.in”ntcp.nhp.gov.in ವೆಬ್ಸೈಟ್ಗಳಲ್ಲಿ 19 ಭಾಷೆಗಳಲ್ಲಿ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ 1 ವರ್ಷ ಮಾತ್ರ. ಡಿ.1 2023ರಲ್ಲಿ ಮತ್ತೆ ಹೊಸ ಎಚ್ಚರಿಕೆ ಜಾರಿಗೆ ಬರಲಿದ್ದು, ‘ತಂಬಾಕು ಬಳಕೆದಾರರು ಕಿರಿಯ ವಯಸ್ಸಿನಲ್ಲೇ ಸಾಯುತ್ತಾರೆ’ ಎಂಬ ಸಂದೇಶ ಇರಲಿದೆ.
ಯಾವುದೇ ವ್ಯಕ್ತಿ ನೇರ ಅಥವಾ ಪರೋಕ್ಷವಾಗಿ ತಂಬಾಕು ಉತ್ಪನ್ನಗಳನ್ನು ತಯಾರಿಸುಸುವುದು, ಸರಬರಾಜು, ಆಮದು, ಉತ್ಪಾದನೆ ಅಥವಾ ಸಿಗರೇಟು ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಾದರೆ ಎಲ್ಲ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಸಚಿವಾಲಯ ನಿರ್ದೇಶಿಸಿದಂತೆ ಆರೋಗ್ಯ ಬಗ್ಗೆ ಎಚ್ಚರಿಕೆಯ ಸಾಲು ಹೊಂದಿರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.