ಭೂಪಾಲ್: ಕರೋನಾ ವೈರಸ್ ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯಲ್ಲಿ ಆಟವಾಡುತ್ತಿದೆ. ಕೆಲವು ಜನರ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಅಂತಹ ಒಂದು ಇತ್ತೀಚಿಗೆ ಘಟನೆ ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಲ್ಲಿ ನಡೆದಿದೆ. ಹೊಸದಾಗಿ ಮದುವೆಯಾದ ಯುವಕನೊಬ್ಬ ಕರೋನಾ ವೈರಸ್ ಸೋಂಕು ತಗಲುತ್ತದೆ ಎಂಬ ಭಯದಿಂದ ತನ್ನ ಹೆಂಡತಿ ಹತ್ತಿರ ಹೋಗಲು ಕೂಡ ಹೆದರಿದ್ದಾನೆ. ಆ ಯುವಕ ಮೂರು ತಿಂಗಳ ಕಾಲ ಹೆಂಡತಿಯಿಂದ ದೂರವಾಗಿದ್ದನು. ಗಂಡ ಮಲಗುವ ಕೋಣೆಗೆ ಬರಲು ಆಸಕ್ತಿ ತೋರಿಸದ ಕಾರಣ ಹೆಂಡತಿ ಅವನನ್ನು ತಪ್ಪಾಗಿ ಅರ್ಥೈಸಿಕೊಂಡು ಅವನಿಗೆ ಶಾಕಿಂಗ್ ಟ್ವಿಸ್ಟ್ ನೀಡಿದ್ದಾಳೆ.
ಭೋಪಾಲ್ ಮೂಲದ ಯುವಕನೊಬ್ಬ ಜೂನ್ 29 ರಂದು ಯುವತಿಯನ್ನು ಮದುವೆಯಾಗಿದ್ದ. ಅಷ್ಟೊತ್ತಿಗೆ ಕರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿತ್ತು. ಮಾಸ್ಕ್ ಧರಿಸಬೇಕು, ದೈಹಿಕ ಅಂತರವನ್ನು ಪಾಲಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಒಂದು ರೀತಿಯ ಕರೋನಾ ಫೋಬಿಯಾ ಯುವಕನನ್ನು ಆವರಿಸಿತ್ತು. ಕರೋನಾ ಮಾರ್ಗ ಸೂಚಿ ಪ್ರಕಾರ ಮದುವೆಯಾಗಿದ್ದರೂ, ಅವನಿಗೆ ಕರೋನ ಭಯವಿತ್ತು. ಮದುವೆ ಮಂಟಪದಿಂದ ಪ್ರಾರಂಭಿಸಿ ತನ್ನ ಮನೆಗೆ ಬಂದ ನಂತರವೂ ಅವನು ತನ್ನ ಹೆಂಡತಿಯೊಂದಿಗೆ ದೈಹಿಕ ಅಂತರ ಕಾಪಾಡಿಕೊಂಡಿದ್ದನು.
ಕರೋನಾ ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ, ಆ ಯುವಕ ತನ್ನ ಹೆಂಡತಿಯ ಅತ್ತಿರ ಹೋಗಲು ಕೂಡ ಹಿಂಜರಿದನು. ಹೆಂಡತಿ ಮೂರು ತಿಂಗಳವರೆಗೆ ಅತ್ತೆ ಮಾವನ ಮನೆಯಲ್ಲೇ ಇದ್ದಳು. ಹೆಂಡತಿಯೊಂದಿಗೆ ಫೋನ್‌ನಲ್ಲಿ ಚೆನ್ನಾಗಿ ಮಾತನಾಡುತ್ತಿದ್ದ ಆ ಯುವಕ ಮಲಗುವ ಕೋಣೆಗೆ ಮಾತ್ರ ಬರಲಿಲ್ಲ. ಇದರಿಂದ ಹೆಂಡತಿಗೆ ಅನುಮಾನ ಶುರುವಾಯಿತು. ಕೊನೆಗೆ ತೀವ್ರ ಹತಾಶೆಗೆ ಗುರಿಯಾಗಿ ತವರು ಮನೆಗೆ ಹೋಗಿದ್ದಾಳೆ.
ಅವಳು ಎರಡು ತಿಂಗಳು ಕಾಲ ತವರು ಮನೆಯಲ್ಲಿ ಇದ್ದಳು. ಆದರೂ ಕೂಡ ಆ ಯುವಕ ತನ್ನ ಹೆಂಡತಿಯ ಅತ್ತಿರ ಹೋಗಲು ಆಸಕ್ತಿ ತೋರಲಿಲ್ಲ. ಏನಾಯಿತು ಎಂದು ತವರು ಮನೆಯವರು ಒತ್ತಾಯ ಮಾಡುವುತ್ತಿದಂತ್ತೆ ಆಕೆ ನಡೆದ ವಿಷಯವನ್ನು ಹೇಳಿಕೊಂಡಿದ್ದಾಳೆ. ತನ್ನ ಗಂಡ ವೈಹಾಹಿಕ ಸಂಸಾರ ಮಾಡಲು ಯೋಗ್ಯನಲ್ಲವೆಂದು ತನ್ನ ರೋದನೆಯನ್ನು ಹೇಳಿ ಕೊಂಡಿದ್ದಾಳೆ. ಆ ನಂತರ ಅವಳು ಕುಟುಂಬ ಸದಸ್ಯರೊಂದಿಗೆ ಸೇರಿ ಅವನಿಂದ ಜೀವನಾಂಶವನ್ನು ಕೊಡಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಳು.
ಮದುವೆಯಾದ ಐದು ತಿಂಗಳಲ್ಲಿ ಅತ್ತೆ ಮಾವ ತನಗೆ ತೀವ್ರ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದು, ತನ್ನ ಗಂಡ ಫೋನ್‌ನಲ್ಲಿ ಚೆನ್ನಾಗಿ ಮಾತನಾಡುತ್ತಿದ್ದ ಆದರೆ ನನ್ನ ಹತ್ತಿರ ಮಾತ್ರ ಬರಲಿಲ್ಲ ಎಂದು ದೂರಿದ್ದು,ಈ ನಿಟ್ಟಿನಲ್ಲಿ ಡಿಸೆಂಬರ್ 2 ರಂದು ಭೋಪಾಲ್ ಕಾನೂನು ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದಾರೆ. ಆ ನಂತರ ನ್ಯಾಯಾಧೀಶರು ಆ ಯುವಕ ಮತ್ತು ಅವರ ಕುಟುಂಬ ಸದಸ್ಯರನ್ನು ಕೌನ್ಸೆಲಿಂಗ್‌ಗೆ ಕರೆದಿದ್ದಾರೆ. ಅಲ್ಲಿ ನೈಜ ವಿಷಯವನ್ನು ತಿಳಿದು ಎಲ್ಲರಿಗೂ ಆಶ್ಚರ್ಯವಾಯಿತು. ಕರೋನಾ ಭಯದಿಂದ ಆ ಯುವಕ ವೈವಾಹಿಕ ಕರ್ತವ್ಯವನ್ನು ಸರಿಯಾಗಿ ಪೂರೈಸಲಿಲ್ಲ ಎಂದು ತಿಳಿದು ಬಂದಿತ್ತು.
ಆ ಯುವಕನ ಮೇಲೆ ವೈದ್ಯಕೀಯ ಪರೀಕ್ಷೆ ಸಹ ನಡೆಸಲಾಯಿತು. ಎಲ್ಲವೂ ಚೆನ್ನಾಗಿದೆ ಎಂದು ಖಚಿತಪಡಿಸಿದ ನಂತರ, ಆ ಯುವತಿಗೂ ಸಹ ಕೌನ್ಸೆಲಿಂಗ್ ನೀಡಿ ಗಂಡನೊಂದಿಗೆ ಕಳುಹಿಸಿದ್ದಾರೆ. ಪ್ರಸ್ತುತ ಆ ಯುವತಿ ತನ್ನ ಗಂಡನ ಮನೆಯಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಭೋಪಾಲ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.
ಇದನ್ನು ಓದಿ: ಸ್ನೇಹಿತನ ಮನೆಗೆ ಊಟಕ್ಕೆ ತೆರಳಿದ್ದ 33 ವರ್ಷದ ಮಹಿಳಾ ಅಧಿಕಾರಿ ನೇಣಿಗೆ ಶರಣು !