ರಷ್ಯಾ ಉಕ್ರೆನ್ ದೇಶದ ಮೇಲೆ ಯುದ್ಧ ಸಾರಿದ್ದು, ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಇದೀಗ ದೇಶ ರಕ್ಷಣೆಗಾಗಿ ಕೈಯಲ್ಲಿ ಗನ್ ಹಿಡಿದು ಹೋರಾಟಕ್ಕೆ ನಿಂತಿದೆ.
ಹೌದು, 21 ವರ್ಷದ ಅರಿವಾ ಹಾಗೂ 24 ವರ್ಷದ ಸ್ವಾಟೋಪ್ಲಾವ್ ನಿನ್ನೆಯಷ್ಟೇ ಸಪ್ತಪದಿ ತುಳಿದಿದ್ದರು. ‘ತಮ್ಮ ದಾಂಪತ್ಯಕ್ಕಿಂತ ದೇಶ ಮುಖ್ಯ’ ಎಂದು ನೂತನ ವಧು-ವರರು ಯುದ್ಧರಂಗಕ್ಕೆ ಧುಮುಕಿದ್ದಾರೆ.
ಇನ್ನು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಜೇಲೆನ್ಸ್ಕಿ ಕರೆಗೆ ಓಗುಟ್ಟಿರುವ ಸಾವಿರಾರು ಜನ ಶತ್ರಸ್ತ್ರ ಹಿಡಿದು ಸ್ವಯಂಪ್ರೇರಿತರಾಗಿ ದೇಶದ ರಕ್ಷಣೆಗೆ ಮುಂದಾಗುತ್ತಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.