Navratri 2025 Day 1 | ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯ ಹಿನ್ನಲೆ, ಆರಾಧನೆ

Navratri 2025 Day 1 | ನವರಾತ್ರಿಯ ಮೊದಲ ದಿನದ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ ದೇವಿ ಶೈಲಪುತ್ರಿಯನ್ನು ಪೂಜಿಸುವ ಸ೦ಪ್ರದಾಯವಿದೆ. ಶ್ವೇತ ವಸ್ತ್ರಧಾರಿಯಾಗಿರುವ, ಮಲ್ಲಿಗೆ ಪ್ರಿಯಳಾದ ಶೈಲಪುತ್ರಿ, ಪರ್ವತರಾಜ ಹಿಮವಂತನ ಮಗಳಾದ ಪಾರ್ವತಿ…

Navratri Day 1 worship of Goddess Shailaputri

Navratri 2025 Day 1 | ನವರಾತ್ರಿಯ ಮೊದಲ ದಿನದ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ ದೇವಿ ಶೈಲಪುತ್ರಿಯನ್ನು ಪೂಜಿಸುವ ಸ೦ಪ್ರದಾಯವಿದೆ. ಶ್ವೇತ ವಸ್ತ್ರಧಾರಿಯಾಗಿರುವ, ಮಲ್ಲಿಗೆ ಪ್ರಿಯಳಾದ ಶೈಲಪುತ್ರಿ, ಪರ್ವತರಾಜ ಹಿಮವಂತನ ಮಗಳಾದ ಪಾರ್ವತಿ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ಆರಾಧನೆಯು ಮನಸ್ಸಿಗೆ ಶಾ೦ತಿ ನೀಡುವುದರೊ೦ದಿಗೆ, ಧಾರ್ಮಿಕ ಜೀವನದ ಮಾರ್ಗವನ್ನು ತೆರೆದಿಡುತ್ತದೆ

ಶೈಲಪುತ್ರಿಯ ಹಿನ್ನಲೆ

Shailaputri Avatars
Shailaputri Avatars

ತನ್ನ ಹಿಂದಿನ ಜನ್ಮದಲ್ಲಿ ದಕ್ಷನ ಮಗಳಾಗಿದ್ದ ಸತಿ, ಪತಿ ಶಿವನ ಅವಮಾನವನ್ನು ಸಹಿಸಲಾರದೆ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದಳು. ಆಕೆ ನಂತರ ಹಿಮವಂತನ ಪುತ್ರಿಯಾಗಿ ಹುಟ್ಟಿ, ಶೈಲಪುತ್ರಿಯಾಗಿ ಶಿವನ ಪತ್ನಿಯಾದಳು. ಈ ಪೌರಾಣಿಕ ಕಥೆಯು ಶೈಲಪುತ್ರಿಯ ಆರಾಧನೆಗೆ ಆಳವಾದ ಹಿನ್ನೆಲೆಯನ್ನು ನೀಡುತ್ತದೆ. ಹೀಗಾಗಿ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ತವರಿಗೆ ಆಹ್ವಾನಿಸುವ ಸಂಪ್ರದಾಯವು ಕೂಡ ಇದೇ ಕಥೆಯಿಂದ ಉದ್ಭವವಾಗಿದೆ.

ಆರಾಧನೆಯ ಮಹತ್ವ & ಫಲಗಳು

ಶೈಲಪುತ್ರಿಯನ್ನು ಆರಾಧಿಸಿದರೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಫಲ ದೊರೆಯುತ್ತದೆ. ಮನಸ್ಸಿನ ಆಸೆಗಳೆಲ್ಲ ಈಡೇರಿದಂತೆ, ಸಂಕಷ್ಟಗಳು ನಿವಾರಣೆಯಾಗುತ್ತವೆ. ಮನಸ್ಸಿನ ಮೇಲೆ ನಿಯಂತ್ರಣ, ಇ೦ದ್ರಿಯ ನಿಗ್ರಹ ಹಾಗೂ ಶಾಂತಿಯುತ ನಡವಳಿಕೆಗೆ ಪ್ರೇರಣೆ ಲಭಿಸುತ್ತದೆ. ದೇವಿಯ ಪೂಜೆಯಿ೦ದ ಜೀವನದಲ್ಲಿ ಸಮತೋಲನ, ಶಾಂತಿ & ಭಕ್ತಿ ಹೆಚ್ಚುತ್ತದೆ.

Vijayaprabha Mobile App free

ಮಂತ್ರ ಜಪದ ಶಕ್ತಿ

ಶೈಲಪುತ್ರಿಯ ಆರಾಧನೆ ವೇಳೆ ಮಂತ್ರ ಜಪ ಅತ್ಯಂತ ಮಹತ್ವದಾಗಿದೆ. ಓ೦ ದೇವಿ ಶೈಲಪುತ್ರಿಯೇ ನಮಃ ಯಾ ದೇವಿ ಸರ್ವಭೂತೇಷು ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ… ಸರ್ವ ಮಂಗಳ ಮಾಂಗಲ್ವೇ ಶಿವೇ ಸರ್ವಾರ್ಥ ಸಾಧಿಕೆ… ಈ ಮಂತ್ರಗಳನ್ನು ಜಪಿಸುವುದರಿಂದ ಆತ್ಮಶಕ್ತಿ ಬೆಳೆಯುತ್ತದೆ, ಸಕಲ ಬಾಧೆಗಳು ದೂರವಾಗುತ್ತವೆ, ಧನ-ಧಾನ್ಯದಲ್ಲಿ ಸಮೃದ್ಧಿ ದೊರೆಯುತ್ತದೆ.

ಶಾಂತಿ, ಸಮೃದ್ಧಿ

ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಪೂಜೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಜೀವನದಲ್ಲಿ ಶಾ೦ತಿ, ನಿಯಮ ಮತ್ತು ಸಮೃದ್ಧಿಯ ಪಾಠವನ್ನು ನೀಡುವ ದಾರಿ ಕೂಡ. ಶೈಲಪುತ್ರಿಯ ಆರಾಧನೆ ಮಾಡುವುದರಿಂದ ಆಕೆಯ ದೈವಿಕ ಆಶೀರ್ವಾದ ನಮ್ಮ ಜೀವನದಲ್ಲಿ ಬೆಳಕು ತರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.