ವೈರಲ್: ನಟಿ ಸನ್ನಿ ಲಿಯೋನ್ ಹಾಗು ನಟ ಇಮ್ರಾನ್ ಹಶ್ಮಿ ಇಬ್ಬರು ಗಂಡ, ಹೆಂಡತಿನಾ? ಇವರಿಗೆ ಒಬ್ಬ ಮಗನಿದ್ದಾನೆಯೇ? ಏನಿದರ ಮರ್ಮ

ಪಾಟ್ನಾ: ಏನಿದು ಮಾದಕ ನಟಿ ಸನ್ನಿ ಲಿಯೋನ್ ಮತ್ತು ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿಇಬ್ಬರು ಗಂಡ, ಹೆಂಡತಿನಾ? ಇವರಿಬ್ಬರು ಯಾವಾಗ ಮದುವೆಯಾದರು? ಅವರಿಗೆ ಒಬ್ಬ ಮಗನಿದ್ದಾನೆಯೇ ಎಂದು ಆಶ್ಚರ್ಯವಾಗುತ್ತದೆಯೇ? ಅಗಾದರೆ ಬಿಹಾರದಲ್ಲಿ ನಡೆದ…

Sunny Leone and Emraan Hashmi vijayaprabha

ಪಾಟ್ನಾ: ಏನಿದು ಮಾದಕ ನಟಿ ಸನ್ನಿ ಲಿಯೋನ್ ಮತ್ತು ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿಇಬ್ಬರು ಗಂಡ, ಹೆಂಡತಿನಾ? ಇವರಿಬ್ಬರು ಯಾವಾಗ ಮದುವೆಯಾದರು? ಅವರಿಗೆ ಒಬ್ಬ ಮಗನಿದ್ದಾನೆಯೇ ಎಂದು ಆಶ್ಚರ್ಯವಾಗುತ್ತದೆಯೇ? ಅಗಾದರೆ ಬಿಹಾರದಲ್ಲಿ ನಡೆದ ಈ ಘಟನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಇದು ವಿದ್ಯಾರ್ಥಿ ಚಾಣಾಕ್ಷತೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷವೋ ಗೊತ್ತಿಲ್ಲ, ಪರೀಕ್ಷಾ ಹಾಲ್ ಟಿಕೆಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಿಹಾರದ ಮುಜಾಫರ್ಪುರದ ಕುಂದನ್ ಕುಮಾರ್ (20) ಧನರಾಜ್ ಮಹತೋ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ಪರೀಕ್ಷೆಯ ಹಿನ್ನೆಲೆಯಲ್ಲಿ ಬೀಮ್ ರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಸಿಬ್ಬಂದಿಗಳು ಅವನ ಹಾಲ್ ಟಿಕೆಟ್ ನೋಡಿ ಆಘಾತಕ್ಕೊಳಗಾಗಿದ್ದಾರೆ.

ಯಾಕೆಂದರೆ ಹಾಲ್ ಟಿಕೆಟ್‌ನಲ್ಲಿ ಕುಂದನ್ ತಾಯಿ ಮಾಜಿ ಅಶ್ಲೀಲ ತಾರೆ ಸನ್ನಿ ಲಿಯೋನ್ ಮತ್ತು ತಂದೆಯ ಹೆಸರು ಖ್ಯಾತ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಎಂದು ಇದೆ. ಅಷ್ಟೇ ಅಲ್ಲದೆ ಅವರು ನಗರದ ರೆಡ್ ಲೈಟ್ ಏರಿಯಾ ಎಂದು ಕರೆಯಲ್ಪಡುವ ಚತುರ್ಭುಜ್ನಲ್ಲಿ ವಾಸಿಸುತ್ತಿದ್ದಾರೆ ಎಂದು ಇದೆ. ಈ ಹಾಲ್ ಟಿಕೆಟ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ, ಇದು ನಮ್ಮ ನಿರ್ಲಕ್ಷ್ಯವಲ್ಲ, ವಿದ್ಯಾರ್ಥಿಯೇ ಸ್ವತಃ ಅರ್ಜಿಯಲ್ಲಿ ಈಗೆ ಬರೆದಿದ್ದಾನೆ ಎಂದು ಅಧಿಕಾರಿಗಳು ಹೇಳುತ್ತಾರೆ.

Vijayaprabha Mobile App free

ಈ ಘಟನೆಯ ಬಗ್ಗೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮಾತನಾಡಿದ್ದು, “ನಾವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ಇದಕ್ಕೆ ಆ ವಿದ್ಯಾರ್ಥಿಯೇ ಕಾರಣ. ಅಧಿಕಾರಿಗಳನ್ನು ದಾರಿ ತಪ್ಪಿಸಲು ಅವನು ಈ ಕೆಲಸ ಮಾಡಿದ್ದಾನೆ. ವಿಚಾರಣೆಯ ನಂತರ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಹಾಲ್ ಟಿಕೆಟ್‌ನಲ್ಲಿರುವ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಮೂಲಕ ವಿದ್ಯಾರ್ಥಿ ಇರುವ ಸ್ಥಳವನ್ನು ನಾವು ಕಂಡುಕೊಳ್ಳುತ್ತೇವೆ, ”ಎಂದು ಹೇಳಿದ್ದಾರೆ.

ಈ ಹಿಂದೆ ಬಿಹಾರದ ಪಿಎಚ್‌ಡಿ ಮೆರಿಟ್ ಲಿಸ್ಟ್ ನಲ್ಲಿ ಸಹ ನಟಿ ಸನ್ನಿ ಲಿಯೋನ್ ಹೆಸರೂ ಕಾಣಿಸಿಕೊಂಡಿತ್ತು. ಆ ಪರೀಕ್ಷೆಯಲ್ಲಿ ನಟಿ ಸನ್ನಿ ಲಿಯೋನ್ ಒಟ್ಟು 98.5 ರಷ್ಟು ಅಂಕ ಪಡೆದು ಉತ್ತೀರ್ಣತೆ ಹೊಂದಿದ್ದಾಳೆ ಮೆರಿಟ್ ಲಿಸ್ಟ್ ನಲ್ಲಿ ತೋರಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.