ಚಿತ್ರದುರ್ಗ: ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯ ನಡುವೆ ಮುರುಘಾ ಶ್ರೀ ಮಠಕ್ಕೆ ವಾಪಾಸ್ ಆಗಿದ್ದು, ಹಾವೇರಿಯಿಂದ ಚಿತ್ರದುರ್ಗದ ಮಠಕ್ಕೆ ಆಗಮಿಸಿರುವ ಮುರುಘಾ ಸ್ವಾಮೀಜಿ ಬೆಂಬಲಿಗರನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ನಾನು ಆರೋಪ ಮುಕ್ತನಾಗುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು.
ಹೌದು, ಈ ಕುರಿತು ಮಾತನಾಡಿದ ಮುರುಘಾ ಶ್ರೀಗಳು, ಮಠದ ಶ್ರೀಗಳ ನೋವು ನಮ್ಮ ನೋವೆಂದು ತಿಳಿದಿರುವ ನಿಮಗೆ ಧನ್ಯವಾದಗಳು. ನಾವೆಲ್ಲರೂ ಸೇರಿ ಈ ಕಳಂಕದ ವಿರುದ್ಧ ಹೊರಾಡೋಣ. ಮಠದ ವಿರುದ್ಧ ಪಿತೂರಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಠದ ಒಳಗೆ ನಡೆಯುತ್ತಿದ್ದ ಪಿತೂರಿ ಈಗ ಹೊರಗೆ ನಡೆಯುತ್ತಿದೆ. ನಾವು ಕಾನೂನಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ನಾನು ಆರೋಪ ಮುಕ್ತನಾಗುತ್ತೇನೆ ಎಂದು ಮುರುಘಾ ಶ್ರೀ ಹೇಳಿದರು.