ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಚೆನ್ನಾಗಿರಬೇಕು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿಕೆ ನೀಡಿದ್ದಾರೆ. ಹಳೆ ಬೆಂಗಳೂರು ಈಗಾಗಲೇ ಹೆಚ್ಚು ಅಭಿವೃದ್ಧಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ಕ್ಷೇತ್ರ ಅಭಿವೃದ್ಧಿಯಾಗಬೇಕು. ಇಂದಿನಿಂದ ಪ್ರತಿನಿತ್ಯ 20 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರಿಗಾಗಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಮತದಾರರ ಋಣವನ್ನು ಈ ಜನ್ಮದಲ್ಲಿ ತೀರಿಸಲು ಆಗಲ್ಲ. ಸಿಎಂ ಸಚಿವರು, ಕಾರ್ಯಕರ್ತರಿಂದ ಪ್ರಚಾರದಿಂದ ನನಗೆ ಬಾರಿ ಬಹುಮತ ಸಿಕ್ಕಿದೆ. ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ.
ನಾನು ಪ್ರತಿ ಕ್ಷಣವೂ ಸತ್ಯವನ್ನೇ ಮಾತನಾಡುತ್ತೇನೆ. ನಾನು ಮಹಿಳೆಯರಿಗೆ ಅವಾಚ್ಯಾ ಶಬ್ದಗಳಿಂದ ನಿಂದಿಸಿಲ್ಲ, ಆದರೆ ನನ್ನ ವಿರುದ್ಧ ಆರೋಪ ಮಾಡಿದ್ದರು. ಇನ್ಮುಂದೆ ನನ್ನ ವಿರುದ್ಧ ಇಂಥ ಆರೋಪಗಳನ್ನು ಮಾಡಬೇಡಿ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿಕೆ ನೀಡಿದ್ದಾರೆ.