ಅಬುದಾಬಿ: ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶೇಖ್ ಜಾಯೆದ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 32ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.
149 ರನ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 16.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಮುಂಬೈ ಪರ ಆರಂಭಿಕ ಆಟಗಾರದ ಕ್ವಿಂಟನ್ ಡಿಕಾಕ್-78, ನಾಯಕ ರೋಹಿತ್ ಶರ್ಮಾ-35, ಹಾರ್ದಿಕ್ ಪಾಂಡ್ಯ-21 ರನ್ ಗಳಿಸಿದರು. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಶಿವಂ ಮಾವಿ, ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಟಗಾರ ಶುಭ್ಮನ್ ಗಿಲ್-21, ನಾಯಕ ಇಯಾನ್ ಮಾರ್ಗನ್-39, ಪ್ಯಾಟ್ ಕಮಿನ್ಸ್-53 ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಪರ ರಾಹುಲ್ ಚಾಹರ್ 2 ವಿಕೆಟ್, ಟ್ರೆಂಟ್ ಬೋಲ್ಟ್, ಕೋಲ್ಟಾರ್ ನೈಲ್ ಹಾಗು ಬುಮ್ರಾ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ವಿಂಟನ್ ಡಿಕಾಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಪ್ರವಾಹ ಸಂಕಷ್ಟ: ರಾಜ್ಯದ ನೆರವಿಗೆ ಧಾವಿಸಿದ ಪ್ರಧಾನಿ ಮೋದಿ..!




