ವಾಹನ ಚಾಲಕರಿಗೆ ಪ್ರಮುಖ ಎಚ್ಚರಿಕೆ. ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಗುಣಮಟ್ಟವಿಲ್ಲದ ಹೆಲ್ಮೆಟ್‌ಗಳನ್ನು ನಿಷೇಧಿಸುತ್ತದೆ. ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕೃತ ಹಾಗು ಐಎಸ್‌ಐ (ಇಂಡಿಯನ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಷನ್) ಮಾರ್ಕ್ ಇರುವ ಹೆಲ್ಮೆಟ್‌ಗಳನ್ನು ಮಾತ್ರ ಮಾರಾಟ ಮಾಡಬೇಕು.
ಕೇಂದ್ರ ಸರ್ಕಾರದ ನಿರ್ಧಾರ ಜೂನ್ 1 ರಿಂದ ಜಾರಿಗೆ ಬಂದಿದೆ. ಆದ್ದರಿಂದ ಕಟ್ಟುನಿಟ್ಟಾದ ಬಿಐಎಸ್ ಮಾನ್ಯತೆ ಹೊಂದಿರುವ ಐಎಸ್‌ಐ ಗುರುತು ಹೊಂದಿರುವ ಹೆಲ್ಮೆಟ್‌ಗಳನ್ನು ಮಾತ್ರ ದೇಶದಲ್ಲಿ ಮಾರಾಟ ಮಾಡಬೇಕು. ಕಡಿಮೆ ಗುಣಮಟ್ಟದ ಐಎಸ್‌ಐ ಗುರುತು ಹಾಕದ ಹೆಲ್ಮೆಟ್‌ಗಳು ಮತ್ತು ನಕಲಿ ಐಎಸ್‌ಐ ಗುರುತು ಮಾಡಿದ ಹೆಲ್ಮೆಟ್‌ಗಳ ಬಳಕೆ ತೊಂದರೆಯಾಗಬಹುದು.
ಕೇಂದ್ರದ ಅಧಿಸೂಚನೆಯ ಪ್ರಕಾರ, ಐಎಸ್‌ಐ ಅಲ್ಲದ ಶಿರಸ್ತ್ರಾಣಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಮತ್ತು ಆಮದು ಮಾಡಿಕೊಳ್ಳುವುದು ಶಿಕ್ಷಾರ್ಹವಾಗಿದ್ದು, ಹಾಗೆ ಮಾಡಿದರೆ 1 ಲಕ್ಷ ರೂ.ನಿಂದ 5 ಲಕ್ಷ ರೂವರೆಗೆ ದಂಡ ವಿಧಿಸಲಾಗುವುದು. ಅಷ್ಟೇ ಅಲ್ಲದೆ, ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.