ಕೇಂದ್ರ ಸರ್ಕಾರ ರೈತರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ 9ನೇ ಕಂತು ಶೀಘ್ರದಲ್ಲೇ ರೈತರ ಖಾತೆಗಳಿಗೆ ಜಮೆಯಾಗಲಿದೆ ಎನ್ನಲಾಗಿದೆ.
ಮೋದಿ ಸರ್ಕಾರ ಈಗಾಗಲೇ 8 ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದು, 9ನೇ ಕಂತಿನ 2,000 ರೂ.ಗಳನ್ನು ಆಗಸ್ಟ್‌ನಲ್ಲಿ ಜಮೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ದಾಖಲೆಗಳು ಸರಿಯಾಗಿದ್ದರೆ, ಸುಮಾರು 12 ಕೋಟಿ ನೋಂದಾಯಿತ ರೈತರಿಗೆ 9ನೇ ಕಂತಿನ ಲಾಭ ಸಿಗಲಿದೆ.
ಇನ್ನು, ಮೋದಿ ಸರ್ಕಾರ ರೈತರಿಗೆ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ವಾರ್ಷಿಕವಾಗಿ 6,000 ರೂಗಳನ್ನು ನೀಡುತ್ತದೆ. ಈ ಹಣವು ಒಂದೇ ಬಾರಿಗೆ ಬರುವುದಿಲ್ಲ. ಈ ಹಣ ತಲಾ 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಇದಕ್ಕಾಗಿ ರೈತರು ತಮ್ಮ ದಾಖಲೆಗಳನ್ನು ಪರಿಶೀಲಿಸಿ, pmkisan.nic.in ಗೆ ಭೇಟಿ ನೀಡುವ ಮೂಲಕ ನೋಂದಣಿ ಹಾಗೂ ನಿಮ್ಮ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.