ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಶ್ವೇತಭವನದಿಂದ ಹೊರಬಂದ ಡೊನಾಲ್ಡ್ ಟ್ರಂಪ್ ಅವರನ್ನು ನೆಟ್ಟಿಗರು ವಿಡಂಬನೆ ಮಾಡುತ್ತಿದ್ದಾರೆ.
ಈಗಾಗಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೋಘ ಜಯಗಳಿಸಿ ಜೋ ಬಿಡೆನ್ ಅವರು ನೂತನ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗಿರುವಾಗ ಕೆಲವರು ಪ್ರಧಾನಿ ಮೋದಿಯವರನ್ನು ಡೊನಾಲ್ಡ್ ಟ್ರಂಪ್‌ಗೆ ಹೋಲಿಸುತ್ತಿದ್ದು, ‘#TrumpGoneModiNext’ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶದ ಆರ್ಥಿಕತೆ ಹದಗೆಟ್ಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತ ರೀತಿ, ಮೋದಿಗೆ ಸೋಲು ಅನಿವಾರ್ಯ ಎಂದು ಮೋದಿ ವಿರುದ್ಧ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
Muslims like me know the evil power of Trump’s dead ‘Muslim ban’ https://t.co/52rWSp1W0R via @MSNBC #TrumpGoneModiNext
— Zoya Ayesha (@ZoyaAyesha1) January 22, 2021