ವಿಪರೀತ ಮೊಬೈಲ್ ಬಳಕೆಯಿಂದ ಮಹಿಳೆಯೊಬ್ಬರು ದೃಷ್ಟಿ ಕಳೆದುಕೊಂಡ ಬಗ್ಗೆ ವೈದ್ಯರೊಬ್ಬರು ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಹೈದರಾಬಾದ್‌ನ ಮಂಜು ಎಂಬಾಕೆ, ಕಡಿಮೆ ಬೆಳಕಿನಲ್ಲೂ ಹೆಚ್ಚು ಸಮಯ ಮೊಬೈಲ್ ನೋಡುತ್ತಿದ್ದರು. ಪರಿಣಾಮ ಅವರಿಗೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (SVS) ಉಂಟಾಗಿದೆ. ಅದು ಕಣ್ಣುಗಳ ಮೇಲೆ ಪರಿಣಾಮ ಬೀರಿದ್ದು, ಒಂದೂವರೆ ವರ್ಷಗಳ ಕಾಲ ದೃಷ್ಟಿದೋಷ ಉಂಟಾಗಿದೆ. ವೈದ್ಯರನ್ನು ಸಂಪರ್ಕಿಸಿದ ಅವರಿಗೆ, ಮೊಬೈಲ್ ಬಳಸದಂತೆ ಸಲಹೆ ನೀಡಲಾಗಿದ್ದು, ಈಗ ಗುಣಮುಖರಾಗುತ್ತಿದ್ದಾರೆ.
ಡಿಜಿಟಲ್ ವಿಷನ್ ಸಿಂಡ್ರೋಮ್ ಬಗ್ಗೆ ಗೊತ್ತೇ?
ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳಂತಹ ಡಿಜಿಟಲ್ ಸಾಧನಗಳನ್ನು ಹೆಚ್ಚು ಸಮಯ ಬಳಸುವುದರಿಂದ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಅಥವಾ ಡಿಜಿಟಲ್ ವಿಷನ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ.
ಅದರಲ್ಲೂ ರಾತ್ರಿ ವೇಳೆ ಲೈಟ್ ಆಫ್ ಮಾಡಿ ಕತ್ತಲೆಯಲ್ಲಿ ಮೊಬೈಲ್ ನೋಡುವುದು, ಕಡಿಮೆ ಬೆಳಕಿನಲ್ಲಿ ಡಿಜಿಟಲ್ ಸಾಧನಗಳ ವೀಕ್ಷಣೆಯಿಂದ ಇದು ಉಂಟಾಗುತ್ತದೆ. ಇದು ದೃಷ್ಟಿದೋಷ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು.