ರೇಣುಕಾಚಾರ್ಯ ಹೊನ್ನಾಳಿ ಹುಲಿ ಎಂದ ಸಿಎಂ; ನಾನು ಹುಲಿ, ಸಿಂಹ ಅಲ್ಲ, ಸೇವಕನೆಂದ ರೇಣುಕಾಚಾರ್ಯ

ಹೊನ್ನಳ್ಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ಇಂತಹ ಕೆಲಸ ಮಾಡುವುದಕ್ಕೆ ತಾಕತ್​ ಇರುವುದು ಹೊನ್ನಾಳಿ ಹುಲಿಗೆ ಮಾತ್ರ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ…

Basavaraj Bommai, MP Renukacharya

ಹೊನ್ನಳ್ಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ಇಂತಹ ಕೆಲಸ ಮಾಡುವುದಕ್ಕೆ ತಾಕತ್​ ಇರುವುದು ಹೊನ್ನಾಳಿ ಹುಲಿಗೆ ಮಾತ್ರ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೇಣುಕಾಚಾರ್ಯರಿಗೆ ಟಿಕೆಟ್ ಖಚಿತ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ಎಂ.ಪಿ.ರೇಣುಕಾಚಾರ್ಯ ಶಾಸಕರಾಗುವುದು ಅಷ್ಟೇ ಸತ್ಯ. ರೇಣುಕಾಚಾರ್ಯ ಅವರನ್ನು 25 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಆರಿಸಿ ಕಳಿಸಿ ಎಂದು ಮನವಿ ಮಾಡಿದರು.

ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ಸಾರಿಗೆ ಸಿಬ್ಬಂದಿ ನೌಕರರ ವೇತನ ಶೇ15ರಷ್ಟು ಹೆಚ್ಚಸಿ ಸರ್ಕಾರ ಆದೇಶ

Vijayaprabha Mobile App free

ನಾನು ಹುಲಿ, ಸಿಂಹ ಅಲ್ಲ, ಸೇವಕ: ರೇಣುಕಾಚಾರ್ಯ

ಇನ್ನು, ರೇಣುಕಾಚಾರ್ಯ ಹೊನ್ನಾಳಿ ಹುಲಿ ಎಂಬ ಸಿಎಂ ಮಾತಿಗೆ, ನಾನು ಹೊನ್ನಾಳಿಯ ಹುಲಿಯಲ್ಲ, ಸಿಂಹವೂ ಅಲ್ಲ. ನಿಮ್ಮ ಮನೆಯ ಮಗ, ಸೇವಕನೆಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಒಟ್ಟು 4500 ಕೋಟಿ ರೂ ಅನುದಾನ ನೀಡಿದ್ದಾರೆ. ಅವರಿಂದಲೇ ಕ್ಷೇತ್ರದಲ್ಲಿ ಆಸ್ಪತ್ರೆ, ಪದವಿ ಕಾಲೇಜು, ದೇವಸ್ಥಾನಗಳ ಅಭಿವೃದ್ಧಿಯಾಗಿದೆ. ಕೊರೋನಾ ಸಂಕಷ್ಟದ ವೇಳೆ ನಿಮ್ಮೊಂದಿಗಿದ್ದು ಸೇವೆ ಮಾಡಿದ್ದೇನೆ. ನಿಮ್ಮನ್ನು ರೋಗಿಗಳಲ್ಲ, ಸೋಂಕಿತರೆಂದು ಕಂಡೆ ಎಂದಿದ್ದಾರೆ.

ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ ಹಣ, ಈಗಲೇ ಚೆಕ್‌ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.