ಸ್ಥಳೀಯ ಶಾಸಕರು ಕಮಿಷನ್ ಪಡೆಯುತ್ತಿದ್ದಾರೆ.. ಇದು 500ರಷ್ಟು ನಿಜ ಎಂದಿದ್ದ ಸಂಸದೆ, ನಟಿ ಸುಮಲತಾ ಅಂಬರೀಷ್ ಅವರ ಆರೋಪಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಅವರು ಕಿಡಿಕಾರಿದ್ದಾರೆ.
ಹೌದು, ಈ ಕುರಿತು ಮಾತನಾಡಿರುವ ಶಾಸಕ ಡಿ.ಸಿ.ತಮ್ಮಣ್ಣ ಅವರು ಸುಮಲತಾ ಏನ್ ಸತ್ಯಹರಿಶ್ವಂದ್ರ ಅಲ್ಲ. ಕಮಿಷನ್ ಆರೋಪದ ಬಗ್ಗೆ ಸುಮಲತಾ ಯಾವುದಾದರೂ ಸಾಕ್ಷಿ ಇದ್ದರೆ ಕೊಡಲಿ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ಸುಮಲತಾ ಏನು ಕಮಿಷನ್ ತೆಗೆದುಕೊಂಡಿಲ್ವಾ? ನಮ್ಮವರಲ್ಲೂ ದಾಖಲೆ ಇದೆ. ಬೇಕಿದ್ದರೆ ತನಿಖೆ ನಡೆಸಲಿ. ನಾವು ತಪ್ಪು ಮಾಡಿದ್ದೇವೆ ಎಂದು ಅವರು ನಿರೂಪಿಸಿದರೆ, ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ಸವಾಲು ಹಾಕಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.