ಬೆಂಗಳೂರು : ರಾಜ್ಯದಲ್ಲಿ ಶಾಲಾರಂಭದ ಸಂಬಂಧ ಜನ ಪ್ರತಿನಿಧಿಗಳಿಂದ ಅಭಿಪ್ರಾಯ ಕೋರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಪತ್ರ ಬರೆದಿದ್ದರು. ಪ್ರತಿಕ್ರಿಯೆ ನೀಡಿರುವವರಲ್ಲಿ ಕೆಲವರು ಸದ್ಯ ಶಾಲೆಗಳನ್ನು ಆರಂಭ ಮಾಡುವುದು ಬೇಡ ಎಂದು ಹೇಳಿದ್ದು, ಬೆರಳೆಣಿಕೆಯ ಜನ ಪ್ರತಿನಿಧಿಗಳು ಶಾಲೆಗಳನ್ನು ಆರಂಭಿಸಲು ಸಲಹೆ ನೀಡಿದ್ದಾರೆ.
ಶಾಲೆಗಳನ್ನು ಆರಂಭ ಮಾಡುವುದು ಬೇಡ ಎಂದವರಲ್ಲಿ ಮಾಜಿ ಸಿಎಂಗಳು ಕೂಡ ಸೇರಿದ್ದಾರೆ ಎನ್ನಲಾಗಿದೆ. ಶಾಲಾರಂಭ ಸಂಬಂಧಿಸಿ ಎಸ್‌ಡಿಎಂಸಿ ಸಭೆಗಳಲ್ಲೂ ಬಹುತೇಕ ಪಾಲಕರು ಸದ್ಯಕ್ಕೆ ಶಾಲಾರಂಭಿಸುವುದು ಬೇಡ ಎಂದಿದ್ದಾರೆ.
ಇಂದು ಬೆಳಗ್ಗೆ 11:30 ಕ್ಕೆ ಶಾಲೆ ಪುನಾರಂಭ ಕುರಿತಂತೆ ಮಹತ್ವದ ನಿರ್ಧಾರ ಸಾಧ್ಯತೆ:
ಶಾಲೆ ಪುನಾರಂಭ ಹಾಗೂ ಶಿಕ್ಷಕರ ವರ್ಗಾವಣೆ ಕುರಿತಂತೆ ಶಿಕ್ಷಣ ಇಲಾಖೆಯ ಹಲವು ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್. ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಬೆಳಿಗ್ಗೆ 11.30ಕ್ಕೆ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಅಲ್ಲದೇ, ಕಾಲೇಜು ಆರಂಭಕ್ಕೆ ಈಗಾಗಲೇ ದಿನಾಂಕ ಕೂಡಾ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.