ದಕ್ಷಿಣ ಕನ್ನಡ : ಸದಾ ಒಂದಿಲ್ಲೊಂದು ವಿಚಾವಾಗಿ ಸುದ್ದಿಯಾಗುವ ಆಹಾರ ಸಚಿವ ಉಮೇಶ್ ಕತ್ತಿ ಸದ್ಯ ಪ್ರತ್ಯೇಕ ರಾಜ್ಯ ವಿಚಾರವನ್ನ ಮತ್ತೆ ಪ್ರಸ್ತಾಪಿಸಿ ಸುದ್ದಿಯಾಗಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ 2024ನೇ ಚುನಾವಣೆಯ ನಂತರ ದೇಶದಲ್ಲಿ 50 ರಾಜ್ಯಗಳನ್ನು ರಚಿಸುವ ಬಗ್ಗೆ ಯೋಚನೆ ಮಾಡಿದ್ದು, ಈ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ , ಈ ದೇಶದಲ್ಲಿ 50 ರಾಜ್ಯಗಳು ಉದಯವಾಗಲಿದ್ದು, ಈ ಬಗ್ಗೆ ಮೋದಿ ಚಿಂತನೆ ನಡೆಸಿದ್ದು, ಸಿದ್ಧತೆ ಕೂಡ ನಡೆಯುತ್ತಿದೆ. ಎರಡೂವರೆ ಕೋಟಿ ಇದ್ದ ಜನಸಂಖ್ಯೆ ರಾಜ್ಯದಲ್ಲಿ ಆರೂವರೆ ಕೋಟಿ ಆಗಿದೆ ಅಂದರೆ ಇದರ ಅರ್ಥ, ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಭಾಗ ಮಾಡಬೇಕಿದೆ ಎಂಬುದು.
ಕರ್ನಾಟಕದಲ್ಲಿ ಎರಡು, ಉತ್ತರಪ್ರದೇಶದಲ್ಲಿ 4 ರಾಜ್ಯ ಮತ್ತು ಮಹಾರಾಷ್ಟ್ರದಲ್ಲಿ 3 ರಾಜ್ಯ ಹೀಗೆ ಹೊಸ ರಾಜ್ಯ ಉದಯವಾಗಲಿದ್ದು, ಇಡೀ ದೇಶದಲ್ಲಿ ಒಟ್ಟು 50 ರಾಜ್ಯ ನಿರ್ಮಾಣವಾಗಲಿದ್ದು, ಈ ಬಗ್ಗೆ ದೇಶದ ಪ್ರಧಾನಿಗಳು ಚಿಂತನೆ ನಡೆಸಿದ್ದಾರೆ ಎಂದು ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.