ಕೋಲಾರ : ಸಿದ್ದರಾಮಯ್ಯ ಜೊತೆ ನಾವೆಲ್ಲರೂ ಇದ್ದು ಮುಖ್ಯಮಂತ್ರಿಯಾಗಿ ಅವರೇ ಮುಂದುವರೆಯುತ್ತಾರೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ಹೌದು, ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ ಅವರು ಬಿಜೆಪಿ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕು ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದರು.
ಇನ್ನೂ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಒಂದು ಮನೆ ಇದ್ದಂತೆ ಏನೇ ಸಮಸ್ಯೆ ಇದ್ದರೂ ಕುಳಿತುಕೊಂಡು ಬಗೆಹರಿಸಬೇಕು. ಇಂತಹ ಘಟನೆ ನಡೆಯಬಾರದಾಗಿತ್ತು. ಇದನ್ನು ಅಂದೇ ನಾನು ಖಂಡಿಸಿದ್ದೇನೆ. ಈ ಬಗ್ಗೆ ನಾಯಕರು ಕ್ರಮ ಕೈಗೊಳ್ಳತ್ತಾರೆ ಎಂದು ಹೇಳಿದರು.