ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನದಿಂದ ದಿನ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಸೇರಿದಂತೆ ಅನೇಕರು ಬಂಧನಕ್ಕೊಳಗಾಗಿದ್ದಾರೆ. ಈಗ ಖ್ಯಾತ ನಿರೂಪಕಿ ಅನುಶ್ರೀ ಕೂಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದ್ದು, ಡ್ರಗ್ಸ್ ಕೇಸ್ ನಲ್ಲಿ ಅನುಶ್ರೀ ವಿಚಾರಣೆ ಮಾಡದಂತೆ ಪ್ರಭಾವಿ ರಾಜಕಾರಣಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ತಿರುಗೇಟು ನೀಡಿದ್ದಾರೆ.
ಕೆಲವು ಬಾರಿ ಎಲ್ಲ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಬಾರದು. ಕುಮಾರಸ್ವಾಮಿಯವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ, ನಮ್ಮ ಕೆಲಸವಷ್ಟೇ ನಮ್ಮದು. ಅನಧಿಕೃತ ಸುದ್ದಿಗೆ ಮಾಜಿ ಸಿಎಂ ಉತ್ತರಿಸಬೇಕಾಗಿರಲಿಲ್ಲ. ಬಹಳ ಬಾರಿ ಹೆಣ್ಣಿನ ಮೂಲವನ್ನ ಅರಿಯೋದಕ್ಕೆ ಆಗಿಲ್ಲ, ಹಾಗೆಯೇ ಸುದ್ದಿ ಮೂಲ ಕೆದಕಿಕೊಂಡು ಹೋಗಬಾರದು ಎಂದು ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.