ಜೂನಿಯರ್ ಚಿರು ಆಗಮನ; ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್

ಬೆಂಗಳೂರು: ಚಿರಂಜೀವಿ ಸರ್ಜಾ ಸಾವಿನಿಂದ ದುಃಖದಲ್ಲಿದ್ದ ಸರ್ಜಾ ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ನಟ ಜಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ಅವರು ಇಂದು ಬೆಂಗಳೂರಿನ ಕೆ ಆರ್ ರಸ್ತೆಯಾ…

meghna raj vijayaprabha

ಬೆಂಗಳೂರು: ಚಿರಂಜೀವಿ ಸರ್ಜಾ ಸಾವಿನಿಂದ ದುಃಖದಲ್ಲಿದ್ದ ಸರ್ಜಾ ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ನಟ ಜಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ಅವರು ಇಂದು ಬೆಂಗಳೂರಿನ ಕೆ ಆರ್ ರಸ್ತೆಯಾ ಅಕ್ಷ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಕುಟುಂಬ ಅದ್ದೂರಿಯಾಗಿ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯವನ್ನು ಮುಗಿಸಿತ್ತು. ಕೆಲ ತಿಂಗಳ ಹಿಂದೆ ಚಿರು ಹೃದಯಾಘಾತದಿಂದ ವಿಧಿವಶರಾಗಿದ್ದರು. ಆಗ ಮೇಘನಾ ಅವರು 4 ತಿಂಗಳ ಗರ್ಭಿಣಿಯಾಗಿದ್ದರು.

maghana raj vijayaprabha news

Vijayaprabha Mobile App free

ಅಲ್ಲದೆ ಇಂದು ಮೇಘನಾ & ಚಿರಂಜೀವಿ ಸರ್ಜಾ ಅವರ ನಿಶ್ಚಿತಾರ್ಥವಾಗಿದ್ದ ದಿನವು ಆಗಿರುವುದು ವಿಶೇಷವಾಗಿದೆ. ಇತ್ತೀಚಿಗೆ ಸರ್ಜಾ ಕುಟುಂಬ ಜೂನಿಯರ್ ಚಿರು ಆಗಮನಕ್ಕೆ ವಿಶೇಷ ವಿಡಿಯೋವೊಂದನ್ನು ಮಾಡಿತ್ತು. ಇನ್ನು ಎರಡು ದಿನಗಳ ಹಿಂದೆ ನಟ ದ್ರುವ ಸರ್ಜಾ ಜೂನಿಯರ್ ಚಿರು ಗೆ ಬೆಳ್ಳಿ ತೊಟ್ಟಿಲು ಖರೀದಿಸಿದ್ದರು. ಈಗ ಎಲ್ಲ ನಿರೀಕ್ಷೆಯಂತೆ ಜೂನಿಯರ್ ಚಿರು ಆಗಮನವಾಗಿದ್ದು, ಎರಡು ಕುಟುಂಬದಲ್ಲಿ ಸಂತಸದ ವಾತಾವರಣ ಉಂಟು ಮಾಡಿದೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಸರ್ಜಾ ಕುಟುಂಬದಿಂದ ಸರ್ಪ್ರೈಜ್; ‘ಹಾರ್ಟ್ಲಿ ವೆಲ್ಕಮ್ ಡಿಯರ್ ಚಿರು’…!

ಇದನ್ನು ಓದಿ: ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.