ದಾವಣಗೆರೆ: ಪಂಚಮ ಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ 2ಡಿ ಮೀಸಲಾತಿಗಾಗಿ ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಪೀಠದಲ್ಲಿ ಶನಿವಾರ ಆರಂಭವಾದ ಹರಜಾತ್ರೆಗೆ ದೊಡ್ಡ ಮಟ್ಟದ ಬೆಂಬಲ, ವಿರೋಧ ಕೇಳಿ ಬರಲಿಲ್ಲ.
ಇದು 2ಎ ಮೀಸಲಾತಿ ಪಡೆಯಲು ಮೆಟ್ಟಿಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮುಖಂಡರು ಹೇಳಿದರೆ. ಪ್ರವರ್ಗ 2ಡಿಗೆ ಎಲ್ಲ ಸೌಲಭ್ಯ ಕಲ್ಪಿಸಿದರೆ ಸಾಧ್ಯ ಎಂದು ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. ಮೀಸಲಾತಿ ವಿಚಾರವಾಗಿ ಹರಜಾತ್ರೆಯಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಯಿತು. ‘ಮೀಸಲಾತಿ’ ವಿಚಾರ ಮಂಡಿಸಿದ ವಕೀಲ ಬಿ.ಎಸ್. ಪಾಟೀಲ್, 2ಡಿಯಲ್ಲಿ ಶೇ.15ರಷ್ಟು ಮೀಸಲಾತಿ ನೀಡಿದರೆ ಒಪ್ಪಿಕೊಳ್ಳುತ್ತೇವೆ ಎಂದರು.
“ರಾಜಕೀಯ ಮೀಸಲಾತಿಯೊಂದಿಗೆ 2A ಯನ್ನು ಪಡೆಯುವ ಬದಲು, ಸಮಾಜದ ಬಡ ಮಕ್ಕಳು ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ಮೀಸಲಾತಿಯನ್ನು ಪಡೆಯಬೇಕಾಗಿದ್ದು, ಅದಕ್ಕಾಗಿ 2ಡಿ, 3ಬಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕೇಳೋಣ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಲಹೆ ನೀಡಿದರು. ಇದಕ್ಕೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಸಮ್ಮತಿಸಿದರು
‘2ಡಿ ಮೀಸಲಾತಿಯನ್ನು ನಾವು ಸ್ವಾಗತಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು’ ಎಂದು ವೀರಶೈವ ಲಿಂಗಾಯತ ಪಂಚಮ ಸಾಲಿ ಅಧ್ಯಕ್ಷ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.