ರಾಜ್ಯಾದ್ಯಂತ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿ ಹೈನುಗಾರಿಕೆಗೆ ಪೆಟ್ಟು ಬಿದ್ದಿದ್ದು, ಹಾಲಿನ ಇಳುವರಿ ಕುಸಿದಿದ್ದು, ಒಕ್ಕೂಟಗಳಲ್ಲಿ ಹಾಲು ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ.
ಹೌದು, ಕೆಎಂಎಫ್ ವ್ಯಾಪ್ತಿಯ 15 ಹಾಲು ಒಕ್ಕೂಟಗಳಿಂದ ಜೂನ್‌ನಲ್ಲಿ ದಿನಕ್ಕೆ ಸರಾಸರಿ 94.18 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು. ಈ ಬಾರಿ ಹಾಲಿನ ಉತ್ಪಾದನೆ ಶೇ.15ರಷ್ಟು ಕುಸಿದಿದ್ದು, ದಿನಕ್ಕೆ ಸರಾಸರಿ 82.13 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗಿದ್ದು, ಜೂನ್ ತಿಂಗಳಿಗೆ ಹೋಲಿಸಿದರೆ ಹಾಲು ಉತ್ಪಾದನೆ 12 ಲಕ್ಷ ಲೀಟರ್ ಕಡಿಮೆಯಾಗಿದೆ.
ಇನ್ನು, ಹಾಲಿನ ಜಿಡ್ಡು, ಘನ ಕೊಬ್ಬಿನ ಅಂಶ ಆಧರಿಸಿ, ಲೀ.5 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ, ಮಳೆಯಿಂದ ಹಸಿರು ಮೇವಿನಲ್ಲಿ ನೀರಿನಂಶ ಹೆಚ್ಚಾಗಿದ್ದು, ಹಸುಗಳು ಗುಣಮಟ್ಟದ ಹಾಲು ಕೊಡುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.