Blood Moon 2026:: ಆಗಸದಲ್ಲಿ ಮತ್ತೊಂದು ವಿಸ್ಮಯ ನಡೆಯಲು ಕ್ಷಣಗಣನೆ ಶುರುವಾಗಿದ್ದು, 2026ರ ಮಾರ್ಚ್ 3 ರಂದು ವಿಶ್ವದಾದ್ಯಂತ ಅಪರೂಪದ ‘ಬ್ಲಡ್ ಮೂನ್’ (Blood Moon) ಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಖಗೋಳ ಆಸಕ್ತರು ಹಾಗೂ ಆಸ್ತಿಕರು ಕಾತರದಿಂದ ಕಾಯುತ್ತಿದ್ದಾರೆ. ಈ ಗ್ರಹಣದ ಸಮಯದಲ್ಲಿ ಚಂದ್ರನು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ (ರಕ್ತವರ್ಣ) ತಿರುಗಲಿದ್ದಾನೆ.
ಇದನ್ನೂ ಓದಿ: Post Office RD Scheme | ದಿನಕ್ಕೆ ಕೇವಲ ₹333 ಉಳಿಸಿದರೆ ಸಾಕು, ಪೋಸ್ಟ್ ಆಫೀಸ್‌ನಿಂದ ಸಿಗುತ್ತೆ ಬರೋಬ್ಬರಿ ₹17 ಲಕ್ಷ!
ಭಾರತೀಯ ಸನಾತನ ಧರ್ಮದಲ್ಲಿ ಚಂದ್ರಗ್ರಹಣಕ್ಕೆ (Chandra Grahana) ವಿಶೇಷ ಹಾಗೂ ಪವಿತ್ರ ಸ್ಥಾನವಿದ್ದು, ಗ್ರಹಣದ ವೇಳೆ ಪಾಲಿಸಬೇಕಾದ ನಿಯಮಗಳು ಹಾಗೂ ಆಚರಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರಹಣ ಕಾಲದ ಆಚರಣೆಗಳು (Rituals to Follow):
ದಾನ-ಧರ್ಮ: ಗ್ರಹಣ ಕಾಲದಲ್ಲಿ ಮತ್ತು ಗ್ರಹಣ ಬಿಟ್ಟ ನಂತರ ಮಾಡುವ ದಾನಕ್ಕೆ ವಿಶೇಷ ಪುಣ್ಯವಿದೆ.
ಸ್ನಾನ ಮತ್ತು ಜಪ: ಗ್ರಹಣ ಸ್ಪರ್ಶ ಹಾಗೂ ಮೋಕ್ಷದ ಸಮಯದಲ್ಲಿ ನದಿ ಸ್ನಾನ ಅಥವಾ ಮನೆಯಲ್ಲೇ ತಲೆಸ್ನಾನ ಮಾಡುವುದು ಶ್ರೇಷ್ಠ. ಈ ಸಮಯದಲ್ಲಿ ಇಷ್ಟದೇವರ ಮಂತ್ರ ಜಪಿಸಿದರೆ ನೂರ್ಮಡಿ ಫಲ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಇದನ್ನೂ ಓದಿ: RBI Recruitment 2026: ಡಿಗ್ರಿ ಆಗಿದ್ರೂ ಸಾಕು, ಆರ್‌ಬಿಐ (RBI) ನಲ್ಲಿ ಭರ್ಜರಿ ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ
ಗರ್ಭಿಣಿಯರಿಗೆ ವಿಶೇಷ ಎಚ್ಚರಿಕೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಋಣಾತ್ಮಕ ಕಿರಣಗಳು ಭ್ರೂಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರಲಿದ್ದು, ಗ್ರಹಣದ ಸಮಯದಲ್ಲಿ ಗರ್ಭಿಣಿಯರು (Pregnant Women) ಮನೆಯಿಂದ ಹೊರಬರಬಾರದು. ಚಾಕು, ಕತ್ತರಿ ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು ಎಂದು ಹಿರಿಯರು ಎಚ್ಚರಿಸುತ್ತಾರೆ.
ಇದನ್ನೂ ಓದಿ: School Admission 2026: LKG, UKG ಮತ್ತು 1ನೇ ಕ್ಲಾಸ್‌ಗೆ ಅಡ್ಮಿಷನ್ ರೂಲ್ಸ್ ಚೇಂಜ್! ವಯೋಮಿತಿ ಫಿಕ್ಸ್ ಮಾಡಿದ ಸರ್ಕಾರ
ಗ್ರಹಣದಲ್ಲೂ ಬಾಗಿಲು ತೆರೆದಿರುವ ಪವಾಡದ ದೇವಾಲಯಗಳು!
ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ರಾಜ್ಯದ ಹಾಗೂ ದೇಶದ ಎಲ್ಲಾ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆದರೆ, ಇದಕ್ಕೆ ಅಪವಾದವೆಂಬಂತೆ ದಕ್ಷಿಣ ಭಾರತದ ಪ್ರಸಿದ್ಧ ಶಿವಕ್ಷೇತ್ರಗಳಾದ ಶ್ರೀಕಾಳಹಸ್ತಿ (Srikalahasti) ಮತ್ತು ಅರುಣಾಚಲೇಶ್ವರ (Arunachalam) ದೇವಾಲಯಗಳು ಗ್ರಹಣದ ಸಮಯದಲ್ಲೂ ತೆರೆದಿರಲಿದ್ದು, ಇಲ್ಲಿ ಗ್ರಹಣದ ದೋಷ ತಟ್ಟುವುದಿಲ್ಲ ಎಂಬ ಪ್ರತೀತಿ ಇದ್ದು, ಭಕ್ತರಿಗೆ ಎಂದಿನಂತೆ ದರ್ಶನದ ಅವಕಾಶವಿರುತ್ತದೆ.
(ಇದೇ ರೀತಿಯ ದಿನನಿತ್ಯದ ಉಪಯುಕ್ತ ಮಾಹಿತಿಗಾಗಿ ವಿಜಯಪ್ರಭ.ಕಾಮ್ ಫೇಸ್‌ಬುಕ್ ಪೇಜ್ ಫಾಲೋ ಮಾಡಿ)




