ದಾವಣಗೆರೆ: ಕತ್ತು ಕೊಯ್ದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹುಣಸಗಟ್ಟ್ಟ ಗ್ರಾಮದ ಟಿಪ್ಪು ಸರ್ಕಲ್‌ನಲ್ಲಿ ನಡೆದಿದೆ. ಕೊಲೆಯಾಗಿ ರಕ್ತ ಮಡುವಿನಲ್ಲಿ ಬಿದ್ದಿರುವ ವ್ಯಕ್ತಿ ಹೊನ್ನಾಳಿ ತಾಲೂಕಿನ ಹುಣಸಗಟ್ಟ ನಿವಾಸಿ ನಜೀರ್ ಅಹಮದ್ (45) ಎಂದು ತಿಳಿದು ಬಂದಿದೆ.
ನಿನ್ನೆ ತಡರಾತ್ರಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದ್ದು, ಹಣಕ್ಕಾಗಿ ಹುಣಸಗಟ್ಟ ನಿವಾಸಿ ನಜೀರ್ ಅಹಮದ್ ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಕೊಲೆಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಧಾಖಲಿಸಿಕೊಂಡಿದ್ದಾರೆ.