ಮಂಗಳೂರು: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಅಧಿಕ ಆದಾಯ ನೀಡುವ ಭರವಸೆಯಿಂದ ಆಕರ್ಷಿತರಾದ ವ್ಯಕ್ತಿಯೊಬ್ಬ ಆನ್ಲೈನ್ ವಂಚಕರಿಗೆ ಬಲಿಯಾಗಿದ್ದು, 76.32 ಲಕ್ಷ ನಷ್ಟವಾಗಿದೆ.
ಡಿಸೆಂಬರ್ 12 ರಂದು ಸಾಗರಿಕಾ ಅಗರ್ವಾಲ್ ಎಂಬುವವರಿಂದ ಟೆಲಿಗ್ರಾಮ್ ಆ್ಯಪ್ನಲ್ಲಿ ಸಂದೇಶವೊಂದು ಹಣ ಕಳೆದುಕೊಂಡಾತರಿಗೆ ಬಂದಿತ್ತು. ಹೂಡಿಕೆಗಾಗಿ ಅವರು ವಾಟ್ಸಾಪ್ನಲ್ಲಿ ಆನ್ಲೈನ್ ಲಿಂಕ್ ಅನ್ನು ಸ್ವೀಕರಿಸಿ, ಲಾಗಿನ್ ಐಡಿ ಮತ್ತು ಪಾಸ್ವರ್ಡ್ ರಚಿಸಲು ಅವರಿಗೆ ಸೂಚನೆ ನೀಡಿದರು.
ಅದರಂತೆ ಡಿಸೆಂಬರ್ 20, 2024 ರಂದು, ಸಂತ್ರಸ್ತರು 1,200 ದಿರ್ಹಮ್ಗಳನ್ನು (ರೂ 27,600) ನಿರ್ದಿಷ್ಟಪಡಿಸಿದ ಬ್ಯಾಂಕ್ ಖಾತೆಗೆ ಹೂಡಿಕೆ ಮಾಡಿದ್ದರು. ಸಂತ್ರಸ್ತರಿಗೆ ಆ ತಿಂಗಳು ಸಣ್ಣ ಲಾಭಾಂಶ ಸಿಕ್ಕಿತು. ಹೆಚ್ಚಿನ ಆದಾಯದ ಭರವಸೆಯಿಂದ ಆಕರ್ಷಿತರಾದ ಸಂತ್ರಸ್ತರಿಗೆ, ಡಿಸೆಂಬರ್ 20 ರಿಂದ ಮಾರ್ಚ್ 11 ರವರೆಗೆ ಕಂತುಗಳಲ್ಲಿ ಒಟ್ಟು 76,32,145 ರೂ. ಹಣವನ್ನು ಹೂಡಿಕೆ ಮಾಡಿಸಲಾಯಿತು.
ವಂಚಕರು ಸೃಷ್ಟಿಸಿದ ‘ನಕಲಿ’ ಖಾತೆಯಲ್ಲಿನ ಲಾಭದ ಮೊತ್ತ ಸುಮಾರು 1.36 ಕೋಟಿ ರೂ. ತಲುಪಿತ್ತು. ಹೂಡಿಕೆ ಮಾಡಿದ ಮೊತ್ತವನ್ನು ಲಾಭಾಂಶದೊಂದಿಗೆ ಹಿಂದಿರುಗಿಸಲು ಅವರು ವಿನಂತಿಸಿದಾಗ, ತೆರಿಗೆ ಪಾವತಿಸದೇ ಹಣವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಬೆನ್ನಲ್ಲೇ ತಾನು ಮೋಸ ಹೋಗಿರುವುದಾಗಿ ತಿಳಿದಿದ್ದು, ಕೂಡಲೇ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.