Mahalakshmi murder : ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಕೊಲೆಯಾದ ಮಹಾಲಕ್ಷ್ಮಿಯ ಕೊಲೆ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ.
ಹೌದು, ಗಂಡನ ಬಿಟ್ಟು ಬಂದಿದ್ದ ಆಕೆಗೆ ಕೆಲಸದ ಸ್ಥಳದಲ್ಲಿ ಮುಕ್ತಿರಂಜನ್ ರಾಯ್ ಫ್ಲೋರ್ ಮ್ಯಾನೇಜರ್ ಆಗಿದ್ದ. ಇಬ್ಬರಿಗೂ ಸ್ನೇಹವಾಗಿ, ಆತ ಮನೆವರೆಗೂ ಡ್ರಾಪ್ ಮಾಡುತ್ತಿದ್ದ. ಲವ್ ಆಗಿತ್ತು.
ಇನ್ನು, ಮದುವೆಯಾಗಿ, ಮಗು ಇರೋ ವಿಷಯ ಲಕ್ಷ್ಮೀ ತಿಳಿಸಿರಲಿಲ್ಲ. ಮದುವೆ ಆಗ್ತೀಯ ಎಂದಾಗ ಒಕೆ ಅಂದಿದ್ದಳು. ಆದರೆ ಆಕೆಗೆ ಬೇರೆ ಸಂಬಂಧ ಇರೋ ಅನುಮಾನ ಬಂದು ಮೊಬೈಲ್ ಚೆಕ್ ಮಾಡಿದಾಗ ಮದುವೆ ವಿಚಾರ ಗೊತ್ತಾಗಿತ್ತು.
ಲಕ್ಷ್ಮಿಯ ಸಂಬಂಧದಿಂದ ‘ಮುಕ್ತಿ’ ಪಡೆಯಲು ಬಯಸಿದ್ದ ಮುಕ್ತಿರಂಜನ್
ಲಕ್ಷ್ಮಿಯ ಸಂಬಂಧದಿಂದ ‘ಮುಕ್ತಿ’ ಪಡೆಯಲು ಬಯಸಿದ್ದ. ಬೇರೆ ಯುವತಿ ಜೊತೆ ಹೊರಟ. ಇದರಿಂದ ಸಿಟ್ಟಾದ ಲಕ್ಷ್ಮಿ, ಯುವತಿ ಜೊತೆ ಜಗಳ ಆಡಿದಳು. ಲಕ್ಷ್ಮಿ ಮೇಲೆ ಆತ ಕೋಪಗೊಂಡ. ವಿಚ್ಛೇದನ ಪಡೆಯುವೆ, ಮದುವೆಯಾಗು ಎಂದು ಲಕ್ಷ್ಮಿ ಪೀಡಿಸಿದಳು. ಇಲ್ಲವಾದರೆ ಪೊಲೀಸ್ ದೂರು ನೀಡ್ತೇನೆ ಎಂದು ಬೆದರಿಸಿದಳು.
ಕೊಲೆಯಾಗುವ ಹಿಂದಿನ ದಿನ ಮುಕ್ತಿ ವೀಕ್ ಆಫ್ ಇದ್ದ. ಆತನನ್ನು ಹುಡುಕಿ ಹೋಗಿ, ಗೋಗರೆದು ಮನೆಯಲ್ಲೇ ಉಳಿದಿದ್ದಳು. ಮರುದಿನ ವೈಯಾಲಿಕಾವಲ್‌ಗೆ ಬಂದಾಗ ಇಬ್ಬರ ನಡುವೆ ಜಗಳವಾಗಿ ಕೊಲೆ ನಡೆದಿದೆ.