ಮಡಿಲು ಕಿಟ್ ಯೋಜನೆ: ಬಾಣಂತಿ ಮತ್ತು ಮಗುವಿಗೆ ಬೇಕಾದ 19 ವಸ್ತುಗಳು ಸಂಪೂರ್ಣ ಉಚಿತ – ಪಡೆಯುವುದು ಹೇಗೆ?

ಮಡಿಲು ಕಿಟ್ ಯೋಜನೆ: ಮಹಿಳೆಯರ ಸಬಲೀಕರಕ್ಕಾಗಿ ಕರ್ನಾಟಕದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಮಡಿಲು ಕಿಟ್ ಯೋಜನೆಯನ್ನು ಗರ್ಭಿಣಿಯರಿಗಾಗಿ ವಿಶೇಷವಾಗಿ ಪರಿಚಯಿಸಲಾಗಿದೆ. 2007ರಲ್ಲಿ ಆರಂಭವಾದ ಈ ಯೋಜನೆಯಡಿ ಸರ್ಕಾರವು ಮಗು ಹುಟ್ಟಿದ ನಂತರ…

"Karnataka Government Madilu Kit Scheme 2026 - Free Baby Care Kit with 19 Items for New Mothers - Happy Mother and Baby in Hospital Thumbnail"

ಮಡಿಲು ಕಿಟ್ ಯೋಜನೆ: ಮಹಿಳೆಯರ ಸಬಲೀಕರಕ್ಕಾಗಿ ಕರ್ನಾಟಕದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಮಡಿಲು ಕಿಟ್ ಯೋಜನೆಯನ್ನು ಗರ್ಭಿಣಿಯರಿಗಾಗಿ ವಿಶೇಷವಾಗಿ ಪರಿಚಯಿಸಲಾಗಿದೆ. 2007ರಲ್ಲಿ ಆರಂಭವಾದ ಈ ಯೋಜನೆಯಡಿ ಸರ್ಕಾರವು ಮಗು ಹುಟ್ಟಿದ ನಂತರ ತಾಯಿಗೆ ಒಂದು ವೆಲ್ ನೆಸ್ ಕಿಟ್ ನೀಡುತ್ತದೆ. ಇದು ತಾಯಿ ಮತ್ತು ಮಗುವಿಗೆ ಪ್ರತಿದಿನ ಉಪಯೋಗಕ್ಕೆ ಬರುವ ದಿನಬಳಕೆ ವಸ್ತುಗಳನ್ನು ಒಳಗೊಂಡಿರುತ್ತದೆ. ಬಾಣಂತಿ ಹಾಗೂ ಶಿಶುವಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲಾಗಿದೆ

ಮಡಿಲು ಕಿಟ್ ಯೋಜನೆಯಿಂದ ಫಲಾನುಭವಿಗಳಿಗೆ ಸಿಗುವ ಪ್ರಯೋಜನಗಳು

ಮಡಿಲು ಕಿಟ್ ಯೋಜನೆಯನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿರ್ವಹಣೆ ಮಾಡುತ್ತದೆ. ಬಾಣಂತಿ ಮತ್ತು ಶಿಶುವಿನ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಿದೆ. ಸುರಕ್ಷಿತ ಹೆರಿಗೆಯ ನಂತರ ತಾಯಿ ಹಾಗೂ ಮಗುವಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಈ ಕಿಟ್‌ ಒಳಗೊಂಡಿದ್ದು ಇದರಿಂದ ಅನೇಕ ಬಾಣಂತಿಯರಿಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗುತ್ತದೆ. ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬಾಣಂತಿಯರಿಗೆ ಮಡಿಲು ಕಿಟ್‌ನಲ್ಲಿ ಲಭ್ಯವಾಗುವ 19 ವಸ್ತುಗಳು

ಬಾಣಂತಿಯರ ಹೆರಿಗೆ ನಂತರ ವೈಯಕ್ತಿಕ ಶುಚಿ ಹಾಗೂ ಶಿಶುವಿನ ಪಾಲನೆಗಾಗಿ ಮಡಿಲು ಕಿಟ್‌ ನೀಡಲಾಗುತ್ತದೆ. ಇದರಲ್ಲಿ ಸೊಳ್ಳೆ ಪರದೆ, ಹತ್ತಿಯ ಕಾರ್ಪೆಟ್ (ಕಾಟನ್), ಹೊದಿಕೆ, ಬೆಡ್‌ ಶೀಟ್, ಸ್ನಾನದ ಸೋಪು, ಬಟ್ಟೆ ಒಗೆಯುವ ಸೋಪು, ಹೊಟ್ಟೆಗೆ ಕಟ್ಟಲು ಬಟ್ಟೆ, ಸ್ಯಾನಿಟರಿ ಪ್ಯಾಡ್, ತೆಂಗಿನ ಎಣ್ಣೆ ತಲಾ, ಟವೆಲ್, ಟೂತ್ ಪೇಸ್ಟ್ ಮತ್ತು ಬ್ರಷ್, ಮಗುವಿಗೆ ಬೆಡ್‌ ಶೀಟ್, ಹೊದಿಕೆ, ಮಗುವಿಗೆ ಸೋಪ್, ರಬ್ಬರ್ ಶೀಟ್, ಡೈಪರ್, ಮಗುವಿಗೆ ಬಟ್ಟೆ, ವುಲಾನ್ ಸ್ವೆಟರ್, ಕ್ಯಾಪ್, ಎಲ್ಲ ಐಟಮ್‌ಗಳನ್ನು ಇಡಲು ಬ್ಯಾಗ್ ಲಭ್ಯವಿರುತ್ತದೆ.

Vijayaprabha Mobile App free

ಮಡಿಲು ಕಿಟ್‌ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಲುವಾಗಿ ಜಾರಿಗೆ ತಂದಿರುವ ಮಡಿಲು ಕಿಟ್ ಯೋಜನೆಯ ಅನುಕೂಲವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಮಡಿಲು ಕಿಟ್‌ ಯೋಜನೆಯ ನೆರವು ಪಡೆಯಲು ಗರ್ಭಿಣಿಯರು ಈ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ನಿಮಗೆ ಈ ಕಿಟ್ ಅನ್ನು ನೀಡಲಾಗುತ್ತದೆ. ಫಲಾನುಭವಿಗಳು ತಮ್ಮ ಯೋಜನೆಯ ಲಾಭ ಪಡೆಯಲು ನಿಮ್ಮ ಹತ್ತಿರದ ಆಶಾ ಕಾರ್ಯಕರ್ತರ ಬಳಿ ಈ ವಿಚಾರ ತಿಳಿಸಿದರೆ ಸಾಕು. ಅವರಿಂದ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಸುಮಾರು ₹1500 ರೂಪಾಯಿ ಬೆಲೆ ಹೊಂದಿರುವ ಮಡಿಲು ಕಿಟ್

ಮಡಿಲು ಕಿಟ್ ಯೋಜನೆಯು ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ ಒಂದು ಭಾಗವಾಗಿದೆ. ಪಿಎಚ್‌ಸಿ, ಸಿಎಚ್‌ಸಿ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಡೆಲಿವರಿಯಾದರೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಈ ಮಡಿಲು ಕಿಟ್ ಗಳ ಬೆಲೆ ಸುಮಾರು ₹1500 ರೂಪಾಯಿ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಡೆಲಿವರಿಯಾದರೆ, ಮಡಿಲು ಕಿಟ್ ಬದಲಾಗಿ 1000 ರೂಪಾಯಿ ಲಭ್ಯವಾಗುತ್ತದೆ. ಇದರ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: P P Edit’z.. TV

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply