ಗಣೇಶ ಹಬ್ಬಕ್ಕೆ ಭರ್ಜರಿ ಸಿಹಿಸುದ್ದಿ ನೀಡಿರುವ ದೇಶೀಯ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಇಳಿಕೆ ಮಾಡಿ ಪರಿಷ್ಕೃತ ದರ ಬಿಡುಗಡೆ ಮಾಡಿದ್ದು, ಇಂದಿನಿಂದಲೇ ಜಾರಿಯಾಗಲಿದೆ.
ಹೌದು, ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 91.5 ರೂ ಇಳಿಕೆ ಮಾಡಲಾಗಿದ್ದು, ಈ ಮೂಲಕ 1976.50 ರೂ. ಇದ್ದ ಸಿಲಿಂಡರ್ ಬೆಲೆ 1,885 ರೂ.ಗಳಿಗೆ ಸಿಗುತ್ತದೆ.
ಈ ವರ್ಷದಲ್ಲಿ ಸತತ 5ನೇ ಬಾರಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಮೇನಲ್ಲಿ 2,354 ರೂ.ಗಳ ದಾಖಲೆಯ ಗರಿಷ್ಠ ಮಟ್ಟ ಏರಿತ್ತು. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಗೆ 1,885 ರೂ. ಪಾವತಿಸಬೇಕಾಗುತ್ತದೆ. ಈ ಮೊದಲು ಇದರ ಬೆಲೆ 1976.50 ರೂ ಇತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.