ಬೆಂಗಳೂರು: ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಮತಾಂತರವಾಗುವಂತೆ ಕಿರುಕುಳ ನೀಡಿದ ಹಿನ್ನಲೆ ಹಾಗು ಸಹೋದರರಿಬ್ಬರು ನಿರಂತರ ಅತ್ಯಾಚಾರಗೈದ ಆರೋಪ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು,ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಶಬ್ಬೀರ್ ಎಂಬ ವ್ಯಕ್ತಿಯನ್ನು ಲವ್ ಜಿಹಾದ್ ಹೆಸರಿನಲ್ಲಿ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಮಹಮದ್ ರಿಜ್ವಾನ್ ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆರೋಪಿ ಮಹಮದ್ ರಿಜ್ವಾನ್ 2018ರಲ್ಲಿ ಹಿಂದೂ ಯುವತಿಯನ್ನು ಪ್ರೀತಿಸಿ ನವಂಬರ್ 2020 ರಲ್ಲಿ ಆಕೆಯ ಜೊತೆ ನಿಶಿತಾರ್ಥ ಮಾಡಿಕೊಂಡಿದ್ದ. ಬಳಿಕ ದುಬೈನಲ್ಲಿ ಕೆಲಸ ಕೊಡುಸುತ್ತೇನೆ ಅಲ್ಲೇ ಇರೋಣ ಎಂದು ಪೀಡಿಸುತ್ತಿದ್ದ ಎನ್ನಲಾಗಿದ್ದು, ಹಣೆಯಲ್ಲಿರುವ ಕುಂಕುಮ ತೆಗೆದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿಗಳಾದ ಬಂಧಿತ ಶಬ್ಬೀರ್ ಮತ್ತು ಮಹಮದ್ ರಿಜ್ವಾನ್ ಇಬ್ಬರು ಸಹೋದರಾಗಿದ್ದು,ಈ ಇಬ್ಬರ ವಿರುದ್ಧ ಯುವತಿ ಮೇಲೆ ನಿರಂತರವಾಗಿ ಅತ್ಯಾಚಾರಗೈದ ಆರೋಪವಿದ್ದು, ಈ ಸಂಬಂಧ ಬೆಂಗಳೂರು ನಗರದ ಚನ್ನಮ್ಮನಕೆರೆ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




