ಮಹತ್ವದ ಸುದ್ದಿ: ರಾಜ್ಯದಲ್ಲಿ ಲಾಕ್ ಡೌನ್ ಸಮಯದಲ್ಲೇ ಅತೀ ಹೆಚ್ಚು ಬಾಲ್ಯ ವಿವಾಹ!

ಬೆಂಗಳೂರು: ವಿಶ್ವದಾತ್ಯಂತ ಕರೋನ ಸೋಂಕು ಹರಡಿದ ಹಿನ್ನಲೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಕೂಡ ಕರೋನ ಸೋಂಕು ಹರಡಿತ್ತು ಈ ಹಿನ್ನಲೆಯಲ್ಲಿ ಕರೋನ ಸೋಂಕು ನಿಯಂತ್ರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾರ್ಚ್ 24…

ಬೆಂಗಳೂರು: ವಿಶ್ವದಾತ್ಯಂತ ಕರೋನ ಸೋಂಕು ಹರಡಿದ ಹಿನ್ನಲೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಕೂಡ ಕರೋನ ಸೋಂಕು ಹರಡಿತ್ತು ಈ ಹಿನ್ನಲೆಯಲ್ಲಿ ಕರೋನ ಸೋಂಕು ನಿಯಂತ್ರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾರ್ಚ್ 24 ರಂದು ದೇಶದಾತ್ಯಂತ ಲಾಕ್ ಜಾರಿ ಮಾಡಿದ್ದರು. ಈಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ಸಮಯದಲ್ಲಿ ಮಕ್ಕಳು ಮನೆಯಲ್ಲಿದ್ದ ಕಾರಣ ಪೋಷಕರು ಬಾಲ್ಯ ವಿವಾಹ ಮಾಡಲು ಮುಂದಾಗಿದ್ದು, ಕೇವಲ ಲಾಕ್ ಡೌನ್ ಮಾಡಿದ್ದ 6 ತಿಂಗಳಿನಲ್ಲಿ ರಾಜ್ಯದಾತ್ಯಂತ ಒಟ್ಟು 1,791 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿದೆ.

ಲಾಕ್ ಡೌನ್ ಸಮಯದಲ್ಲಿ ಕಳೆದ ಏಪ್ರಿಲ್ ನಲ್ಲಿ 192, ಮೇ 579, ಜೂನ್ 578, ಜುಲೈ 170, ಆಗಸ್ಟ್ 224, ಸೆಪ್ಟೆಂಬರ್ 111 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದವು ಎಂದು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

Vijayaprabha Mobile App free

ಇನ್ನು ಲಾಕ್ ಡೌನ್ ಮಾಡಿದ ಈ ಅವಧಿಯ ನಡುವೆ ಅಧಿಕಾರಿಗಳು 2,655 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.