Google Pay Loan facility | 24 ಗಂಟೆಗಳಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯ

Google Pay Loan facility : ಮಧ್ಯಮ ವರ್ಗದ ಜನರಿಗೆ ಆರ್ಥಿಕ ತುರ್ತು ಪರಿಸ್ಥಿತಿ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಅಥವಾ ವ್ಯಾಪಾರಕ್ಕಾಗಿ ತಕ್ಷಣದ ಹಣದ ಅಗತ್ಯವಿದ್ದಾಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಇಂದು ವರದಾನವಾಗಿದೆ. ಗೂಗಲ್…

Google Pay

Google Pay Loan facility : ಮಧ್ಯಮ ವರ್ಗದ ಜನರಿಗೆ ಆರ್ಥಿಕ ತುರ್ತು ಪರಿಸ್ಥಿತಿ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಅಥವಾ ವ್ಯಾಪಾರಕ್ಕಾಗಿ ತಕ್ಷಣದ ಹಣದ ಅಗತ್ಯವಿದ್ದಾಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಇಂದು ವರದಾನವಾಗಿದೆ. ಗೂಗಲ್ ಪೇ ₹5,00,000 ವರೆಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ಈ ಸಾಲದ ಸಂಪೂರ್ಣ ಮಾಹಿತಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಹಂತ ಹಂತದ ವಿವರಗಳನ್ನು ತಿಳಿಯಬಹುದು.

24 ಗಂಟೆಗಳಲ್ಲಿ ₹5 ಲಕ್ಷದವರೆಗೆ ಸಾಲ!

ಗೂಗಲ್ ಪೇ ಈಗ ಕೇವಲ ಹಣ ವರ್ಗಾವಣೆ ಮತ್ತು ಬಿಲ್ ಪಾವತಿಗೆ ಮಾತ್ರವಲ್ಲದೆ, DMI Finance ಮತ್ತು IDFC FIRST Bank ನಂತಹ ಬ್ಯಾಂಕಿಂಗ್ ಪಾಲುದಾರರೊಂದಿಗೆ ಸೇರಿ ಸಾಲ ಸೌಲಭ್ಯವನ್ನೂ ನೀಡುತ್ತಿದೆ. ದಾಖಲೆಗಳು ಸರಿಯಾಗಿದ್ದರೆ 24 ಗಂಟೆಗಳ ಒಳಗೆ ₹5,00,000 ವರೆಗೆ ಸಾಲ ಪಡೆಯಬಹುದು. ವಾರ್ಷಿಕ ಬಡ್ಡಿ ದರ 10% ರಿಂದ 36% ರವರೆಗೆ ಇರಲಿದ್ದು, ಇದು ಸಿಬಿಲ್ ಸ್ಕೋ‌ರ್ ಆಧರಿಸಿರುತ್ತದೆ. ಸಾಲವನ್ನು 6 ರಿಂದ 32 ತಿಂಗಳ ಇಎಂಐ ಮೂಲಕ ಮರುಪಾವತಿಸಬಹುದು.

ಅರ್ಹತೆಗಳು

  • ಗೂಗಲ್ ಪೇ ಮೂಲಕ ಸಾಲ ಪಡೆಯಲು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರಬೇಕು.
  • ಭಾರತೀಯ ಪ್ರಜೆಯಾಗಿರಬೇಕು, 21 ರಿಂದ 59 ವರ್ಷ ವಯಸ್ಸಿನೊಳಗಿರಬೇಕು.
  • ಖಾಸಗಿ ಅಥವಾ ಸರ್ಕಾರಿ ಕೆಲಸದಲ್ಲಿ ಮಾಸಿಕ ಕನಿಷ್ಠ ₹15,000 ದಿಂದ ₹25,000 ಆದಾಯವಿರಬೇಕು.
  • ಇನ್ನು, CIBIL ಸ್ಕೋರ್ 700 ಕ್ಕಿಂತ ಹೆಚ್ಚಿದ್ದರೆ ಸಾಲ ಸಿಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಮೊಬೈಲ್‌ನಲ್ಲೇ ಸಾಲಕ್ಕೆ ಅರ್ಜಿ

ಬ್ಯಾಂಕುಗಳಿಗೆ ಅಲೆಯುವ ಕಿರಿಕಿರಿ ಇಲ್ಲದೆ, ಮೊಬೈಲ್‌ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ವಿವರಿಸಲಾಗಿದೆ. Google Pay ಆಪ್ ತೆರೆದು, ‘Busi-ness and Bills’ ವಿಭಾಗದಲ್ಲಿರುವ Loans’ ಆಯ್ಕೆ ಕ್ಲಿಕ್ ಮಾಡಿ. ಅರ್ಹತೆಗೆ ತಕ್ಕ ಸಾಲದ ಆಫರ್‌ಗಳು ಕಾಣಿಸುತ್ತವೆ. ಬೇಕಾದ ಮೊತ್ತ, ಮರುಪಾವತಿ ಅವಧಿ ಆಯ್ಕೆ ಮಾಡಿ, ವೈಯಕ್ತಿಕ ವಿವರ, ದಾಖಲೆ ಅಪ್ ಲೋಡ್ ಮಾಡಿ. ಕೆವೈಸಿ ಪೂರ್ಣಗೊಂಡ ಬಳಿಕ ಬ್ಯಾಂಕ್‌ ಪರಿಶೀಲಿಸಿ ಸಾಲ ಮಂಜೂರು ಮಾಡುತ್ತದೆ.

Vijayaprabha Mobile App free

ಮೋಸದ ಬಗ್ಗೆ ಎಚ್ಚರಿಕೆ

ಇನ್ನು, ಗೂಗಲ್ ಪೇ ಅಥವಾ ಅದರ ಪಾಲುದಾರ ಬ್ಯಾಂಕುಗಳು ಸಾಲ ನೀಡಲು ಯಾವುದೇ ವ್ಯಕ್ತಿಯ ಮೂಲಕ ಮುಂಗಡ ಹಣ ಕೇಳುವುದಿಲ್ಲ. ಸಾಲದ ಮಿತಿ ₹5 ಲಕ್ಷ ಗರಿಷ್ಠವಾಗಿದ್ದರೂ, ಎಲ್ಲರಿಗೂ ಅಷ್ಟೇ ಮೊತ್ತ ಸಿಗುವುದಿಲ್ಲ; ಇದು ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ಸಾಲ ಪಡೆಯುವ ಮುನ್ನ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply