ಸರ್ಕಾರವು ದೇಶದ ಸುಮಾರು 80 ಕೋಟಿ ಜನರಿಗೆ ಪಡಿತರ ಚೀಟಿ ಮೂಲಕ ಉಚಿತ ಪಡಿತರವನ್ನ ನೀಡುತ್ತಿದೆ. ರೇಷನ್ ಕಾರ್ಡ್ ದುರ್ಬಳಕೆ ತಪ್ಪಿಸಲು ಅಗತ್ಯ ಅಪ್‌ಡೇಟ್‌ಗೆ ಸರ್ಕಾರ ಸೂಚಿಸಿದೆ.
ಹೌದು, ಪಡಿತರ ಚೀಟಿ ಹಲವಾರು ಕಾರ್ಯಗಳಿಗೆ ಮುಖ್ಯವಾಗಿದ್ದು, ಕಾಲಕಾಲಕ್ಕೆ ನವೀಕರಿಸಲು ಸರ್ಕಾರ ಸೂಚನೆ ನೀಡುತ್ತದೆ. ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ರೇಷನ್ ಕಾರ್ಡ್‌ಗೆ ಲಿಂಕ್ ಮಾಡಲು ಸೂಚಿಸಲಾಗಿದೆ. ಮೊಬೈಲ್ ಸಂಖ್ಯೆ ಅಪ್‌ಡೇಟ್‌ನಿಂದ ಒಬ್ಬ ವ್ಯಕ್ತಿಗೆ ಒಂದೇ ಬಾರಿ ಪಡಿತರ ಸಿಗಲಿದೆ. ಆತ ಬಳಸುತ್ತಿರುವ ಮೊಬೈಲ್ ಸಂಖ್ಯೆಗೆ OTP ಬಂದ ಮೇಲೆ ಮಾತ್ರ ರೇಷನ್ ವಿತರಿಸಲಾಗುತ್ತದೆ.
ಆದ್ರೆ ಆಗಾಗ ದೂರವಾಣಿ ಸಂಖ್ಯೆಯನ್ನು ಬದಲಿಸಬೇಡಿ. ಇದರಿಂದ ಚೀಟಿಗೆ ತೊಂದರೆಯುಂಟಾಗಬಹುದು. ಬದಲಿಸಿದರೂ ಅಪ್‌ಡೇಟ್ ಮಾಡಲು ಮರೆಯಬೇಡಿ. ಲಿಂಕ್ ಆದ ನಂಬರ್‌ಗೆ ಮಾತ್ರ ರೇಷನ್ ಸಿಗುತ್ತದೆ. ಆನ್‌ಲೈನ್/ ಆಫ್‌ಲೈನ್ ಮೂಲಕ ಈ ಕೆಲಸ ಮಾಡಬಹುದು.
ರೇಷನ್ ಕಾರ್ಡ್‌ನ ಮೊಬೈಲ್ ಸಂಖ್ಯೆ ಹೀಗೆ ನವೀಕರಿಸಿ..
* https://nfsa.gov.in/sso/frmPublicLogin.aspx ವೆಬ್‌ಸೈಟ್ ಕ್ಲಿಕ್ ಮಾಡಿ.
*ನಿಮ್ಮ ರಾಜ್ಯ ಆಯ್ಕೆ ಮಾಡಿ, ಅಲ್ಲಿ ಕೇಳಿರುವ ಆಯ್ಕೆಗಳ ಭರ್ತಿ ಮಾಡಿ.
*ನಿಮ್ಮ ‘ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ’ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಪಡಿತರ ಚೀಟಿ ಸಂಖ್ಯೆ, ಹೊಸ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
*ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೇವ್ ಕ್ಲಿಕ್ ಮಾಡಿ.
*ಈಗ ಹೊಸ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಡಿತರ ಚೀಟಿಯಲ್ಲಿ ನವೀಕರಿಸಲಾಗುತ್ತದೆ.