ಬೆಂಗಳೂರು: ನಾಳೆಯಿಂದ ಸಾಲು-ಸಾಲು ರಜೆ ಇದ್ದು ಯಾವುದೇ ಬ್ಯಾಂಕ್, ಸರ್ಕಾರೀ ಕಚೇರಿಯ ಕೆಲಸ ಕಾರ್ಯಗಳಿದ್ದಲ್ಲಿ ಬೇಗ ಮುಗಿಸಿಕೊಳ್ಳಿ.
ಹೌದು ಏಪ್ರಿಲ್ 10ರಂದು 2ನೇ ಶನಿವಾರ,ಏಪ್ರಿಲ್11 ಭಾನುವಾರ, ಏಪ್ರಿಲ್13 ಯುಗಾದಿ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಪ್ರಯುಕ್ತ 4 ದಿನ ರಜೆ ಇರುತ್ತವೆ. ಹೀಗಾಗಿ ಇಂದೇ ಬ್ಯಾಂಕ್ ವ್ಯವಹಾರ, ಕಂದಾಯ ಇಲಾಖೆ, ಇತರೆ ಸರ್ಕಾರಿ ಕಚೇರಿ ಕೆಲಸಗಳಿದ್ದಲ್ಲಿ ಬೇಗನೆ ಮುಗಿಸಿಕೊಳ್ಳುವುದು ಒಳ್ಳೆಯದು.
ಆದರೆ, ಏಪ್ರಿಲ್ 12ರಂದು ಸೋಮವಾರ ಬ್ಯಾಂಕ್ ಇದ್ದರೂ ಅಂದು ಯುಗಾದಿ ಅಮಾವಾಸ್ಯೆ ಇರುವುದರಿಂದ ಹೆಚ್ಚಿನ ಕೆಲಸಗಳು ಆಗುವ ಸಾಧ್ಯತೆ ಕಡಿಮೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.