ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಇನ್ನು ಸಂಪೂರ್ಣವಾಗಿ ಮಳೆ ನಿಂತಿಲ್ಲ. ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿಯ ಕೆಲ ಭಾಗದಲ್ಲಿ ಇಂದಿನಿಂದ ಆ.20 ರವರೆಗೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಬಾದಾಮಿ, ಬೆಳಗಾವಿ ಬೆಂಗಳೂರು ನಗರ, ಬೀದರ್, ಧಾರವಾಡ, ಗೋಕರ್ಣ, ಹಾಸನ, ಕಲಬುರ್ಗಿ, ಕಾರವಾರ, ಮಡಿಕೇರಿ, ಮಂಡ್ಯ, ಮಂಗಳೂರು ಹಾಗೂ ಮೈಸೂರಿನ ಸುತ್ತಮುತ್ತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ಮಾತ್ರವಲ್ಲದೇ, ರಾಜಸ್ಥಾನ, ಗುಜರಾತ್, ಕೊಂಕಣ ಮತ್ತು ಗೋವಾ ದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಘಟಪ್ರಭಾ ನದಿ ಕೂಡ ಉಕ್ಕಿ ಹರಿಯುತ್ತಿದೆ.
ವಿವಿಧ ನಗರಗಳ ತಾಪಮಾನ:
ಬೆಂಗಳೂರು: 30-20
ದಾವಣಗೆರೆ: 30-21
ಚಿತ್ರದುರ್ಗ: 30-21
ಹಾವೇರಿ: 29-21
ಬಳ್ಳಾರಿ: 34-23
ಗದಗ: 30-21
ಕೊಪ್ಪಳ: 32-22
ರಾಯಚೂರು: 33-23
ಯಾದಗಿರಿ: 32-23
ವಿಜಯಪುರ: 30-21
ಬೀದರ್: 28-20
ಕಲಬುರಗಿ: 31-22
ಬಾಗಲಕೋಟೆ: 31-22
ಮಂಗಳೂರು: 29-23
ಶಿವಮೊಗ್ಗ: 29-21
ಬೆಳಗಾವಿ: 27-17
ಮೈಸೂರು: 31-20
ಮಂಡ್ಯ: 32-21
ಕೊಡಗು: 26-17
ರಾಮನಗರ: 31-21
ಹಾಸನ: 28-18
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 31-19
ಕೋಲಾರ: 31-21
ತುಮಕೂರು: 30-20
ಉಡುಪಿ: 29-24
ಕಾರವಾರ: 29-24
ಚಿಕ್ಕಮಗಳೂರು: 28-18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.