Election: ರಾಜ್ಯದಲ್ಲಿ ಚುನಾವಣೆ, ಹೈ ಅಲರ್ಟ್‌; ಹೇಗಿರುತ್ತದೆ ಮತದಾನ ಪ್ರಕ್ರಿಯೆ? ನಿಮ್ಮ ಕೈಯಲ್ಲಿದೆ ಬ್ರಹ್ಮಾಸ್ತ್ರ

Election Election

Elections in the state: ನಾಳೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ (Assembly Constituency) ಮತದಾನ (Voting) ನಡೆಯುವುದರಿಂದ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿದೆ. ರಾಜ್ಯದಲ್ಲಿ 58,282 ಮತಗಟ್ಟೆಗಳಿದ್ದು ಎಲ್ಲೆಡೆ ಕೆಎಸ್‌ಆರ್‌ಪಿ, ಪೊಲೀಸ್‌ರ ಹದ್ದಿನ ಕಣ್ಣು ಇರಲಿದೆ. ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಭದ್ರತೆಯನ್ನು ದುಪ್ಪಟ್ಟು ಮಾಡಲಾಗಿದೆ. ರಾಜ್ಯದ ಪೊಲೀಸರ ಜೊತೆ ಹೊರ ರಾಜ್ಯದ ಪೊಲೀಸರನ್ನು ಕೂಡ ಶಾಂತಿ ಮತ್ತು ಸುವ್ಯವಸ್ಥಿತ ಮತದಾನಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್; ಉಚಿತ ರೇಷನ್ ಬದಲು ಹಣ, ಇವರಿಗೆ ಮಾತ್ರ..!

ನಿಮ್ಮ ಹೆಸರು ಖಾತ್ರಿಪಡಿಸಿಕೊಳ್ಳಿ

ಇಂದೇ ನಿಮ್ಮ ಹೆಸರನ್ನು nvsp.in ಅಥವಾ ಚುನಾವಣಾ ಆ್ಯಪ್‌ನಲ್ಲಿ ನಿಮ್ಮ ಹೆಸರು ಖಾತ್ರಿಪಡಿಸಿಕೊಳ್ಳಿ. ವೆಬ್‌ಸೈಟ್‌, ಆ್ಯಪ್‌ ಬಳಸಲು ಗೊತ್ತಾಗದವರು 1950ಗೆ ಕರೆ ಮಾಡಿ. ನೀವು ಮತ ಚಲಾಯಿಸಬೇಕಾದ ಮತಗಟ್ಟೆ ಯಾವುದು ಎಂದು ತಿಳಿದುಕೊಳ್ಳಿ. ನಾಳೆ ಸಾರ್ವತ್ರಿಕ ರಜೆಯಾಗಿದ್ದು ಸುತ್ತಾಡಲು ಹೋಗಬೇಡಿ. ಅಭ್ಯರ್ಥಿ ಕುರಿತೂ ಮಾಹಿತಿ ಇರಲಿ. ಮಳೆ ಸಾಧ್ಯತೆಯಿದೆ ಎಂದು ಉದಾಸೀನ ಮಾಡಬೇಡಿ. ಬೇರೆ ಊರಿನಲ್ಲಿ ಮತವಿದ್ದರೆ ಇಂದೇ ಸಿದ್ಧತೆ ಮಾಡಿಕೊಳ್ಳಿ. ಸ್ನೇಹಿತರು, ಬಂಧುಗಳನ್ನು ಮತದಾನಕ್ಕೆ ಪ್ರೇರೇಪಿಸಿ.

Advertisement

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಉತ್ತಮ ಅವಕಾಶ; ಉಚಿತವಾಗಿ address proof ನವೀಕರಿಸಿಕೊಳ್ಳಿ!

ಹೇಗಿರುತ್ತದೆ ಮತದಾನ ಪ್ರಕ್ರಿಯೆ?

election
  • ಮತಗಟ್ಟೆಯಲ್ಲಿ ಸರತಿ ಸಾಲಿನಂತೆ ಮತದಾರರ ಹೆಸರನ್ನು ಪರಿಶೀಲಿಸಿ, ಮತದಾನಕ್ಕೆ ಅವಕಾಶ ಕೊಡುತ್ತಾರೆ
  • ಬೆರಳಿಗೆ ಶಾಯಿ ಹಾಕಿ, ಸ್ಲಿಪ್‌ ನೀಡಿ, ಸಹಿ ತೆಗೆದುಕೊಳ್ಳುತ್ತಾರೆ
  • ಸ್ಲಿಪ್‌ನ್ನು ಮತ್ತೊಬ್ಬ ಅಧಿಕಾರಿಗೆ ನೀಡಿ, ಶಾಯಿ ಹಚ್ಚಿದ ಬೆರಳು ತೋರಿಸಿ EVM ಕಡೆಗೆ ಮುಂದುವರೆಯಿರಿ
  • ಅಭ್ಯರ್ಥಿಗಳ ಬಗ್ಗೆ EVMನಲ್ಲಿ ನೋಡಿಕೊಳ್ಳಿ, ಮತ ಚಲಾಯಿಸಿ
  • VVPATನಲ್ಲಿ ನಿಮ್ಮ ಮತ ಚಲಾವಣೆಯಾಗಿರುವ ಬಗ್ಗೆ ಪರಿಶೀಲಿಸಿ
  • ಹೆಚ್ಚಿನ ಮಾಹಿತಿಗೆ ಚುನಾವಣಾ ಆಯೋಗದ ವೆಬ್‌ಸೈಟ್‌ ಸಂಪರ್ಕಿಸಬಹುದು

ಇದನ್ನು ಓದಿ: ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ 18 ಲಕ್ಷ ರೂ ನೇರವಾಗಿ ಖಾತೆಗೆ..!

ಹೇಗಿವೆ ಮತಗಟ್ಟೆಗಳು?

ಚುನಾವಣಾ ಆಯೋಗ ಈ ಬಾರಿ ಮತದಾರರನ್ನು ಸೆಳೆಯಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ವಿಭಿನ್ನ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಚುನಾವಣಾ ಆಯೋಗ ಸಾಮಾನ್ಯ ಮತಗಟ್ಟೆ, ಪಿಂಕ್‌ ಮತಗಟ್ಟೆ, ಯುವ ಮತಗಟ್ಟೆ, ಪರಿಸರ ಮತಗಟ್ಟೆ ,ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಕ್ರೀಡಾ ಮತಗಟ್ಟೆ ಮತ್ತು ವಯೋವೃದ್ಧರಿಗಾಗಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ. ಮತದಾನ ತಡವಾಗಬಾರದು ಅನ್ನುವುದಕ್ಕೆ ಈ ಕ್ರಮವಾಗಿದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಸಿಹಿ ಸುದ್ದಿ; ಈ ತಿಂಗಳಲ್ಲೇ ಸಿಗಲಿದೆ ಎರಡು ಬಾರಿ ಉಚಿತ ರೇಷನ್!

ಮತದಾನಕ್ಕೆ ಹೇಗಿದೆ ಭದ್ರತೆ?

  • ಕೇಂದ್ರ ಮೀಸಲು ಪಡೆ, ಪೊಲೀಸ್‌ ಇಲಾಖೆಯಿಂದ 1.56 ಲಕ್ಷ ಸಿಬ್ಬಂದಿ
  • 8 ಕಮಿಷನರೇಟ್‌, ಎಲ್ಲಾ ಜಿಲ್ಲಾ ಎಸ್‌ಪಿಗಳಿಂದ ಬಂದೋಬಸ್ತ್‌
  •  ಅವ್ಯವಹಾರ ತಡೆಯಲು 700 ಕ್ಕೂ ಹೆಚ್ಚು ವಿಚಕ್ಷಣ ದಳ
  • 714 ರೌಡಿಗಳ ಬಂಧನ, 68 ಮಂದಿಯ ಬಂಧನ
  • 11,617 ಸೂಕ್ಷ್ಮ ಮತಗಟ್ಟೆಗಳು
  • ಪ್ರತಿ ಮತಗಟ್ಟೆಯಲ್ಲಿ ಸಿಎಪಿಎಫ್‌ ತುಕಡಿ & ಪೊಲೀಸರ ಭದ್ರತೆ
  • 749 ಸೆಕ್ಟರ್‌ ಮೊಬೈಲ್‌ ವೆಹಿಕಲ್‌
  • 20 ಬೂತ್‌ಗೆ ಒಂದು ಸೆಕ್ಟರ್‌ ಮೊಬೈಲ್‌ ವಾಹನ
  • ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗೆ ಸೆಕ್ಟರ್‌ ವೆಹಿಕಲ್‌ ಉಸ್ತುವಾರಿ

ಇದನ್ನು ಓದಿ: ಆರೋಗ್ಯವಂತ ವ್ಯಕ್ತಿಗೆ ರೂ.3 ಲಕ್ಷ ಬೆನಿಫಿಟ್; ಏಳು ಪಟ್ಟು ಹೆಚ್ಚು ಡೆತ್ ಬೆನಿಫಿಟ್!

ನಿಮ್ಮ ಕೈಯಲ್ಲಿದೆ ಬ್ರಹ್ಮಾಸ್ತ್ರ.. ತಪ್ಪಿಸಿಕೊಳ್ಳಬೇಡಿ

ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆ ತನಕ ನಡೆಯಲಿದೆ. 11 ಗಂಟೆಗಳ ಕಾಲ ಮತದಾನಕ್ಕೆ ಅವಕಾಶ ನೀಡಲಾಗಿದ್ದು ರಾಜ್ಯದ ಎಲ್ಲಾ ಅರ್ಹರು ಇದರಲ್ಲಿ ಭಾಗಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದು ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಮಾಜದ ಗಣ್ಯರು ಕಳಕಳಿಯ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗವೂ ಮತದಾನ ತಪ್ಪಿಸಿಕೊಳ್ಳಬಾರದು ಎಂದು ಮತದಾರರಲ್ಲಿ ಮನವಿ ಮಾಡಿದೆ.

ಇದನ್ನು ಓದಿ: ರೇಷನ್‌ ಕಾರ್ಡ್‌ ಇದ್ದವರು ಈ ಕೆಲಸ ಮಾಡದಿದ್ದರೆ, ರೇಷನ್‌ ಕಾರ್ಡ್‌ ರದ್ದು; ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement