ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಾತನಾಡಿದ್ದು, ಪಕ್ಷ ಸಂಘಟನೆ ಕಷ್ಟ ಏನೆಂಬುದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೊತ್ತು ಎಂದಿದ್ದಾರೆ. ಈ ವೇಳೆ, ಕಾಂಗ್ರೆಸ್ ಗೆ ಶಕ್ತಿ ಇಲ್ಲ. ಬಾಗಿಲು ತೆರೆದಿದ್ದೇವೆ, ಯಾರನ್ನು ಬೇಕಾದರೂ ಕರೆದೊಯ್ಯಲಿ. ನಮ್ಮ ಮನೆಗೆ ಹೇಗೆ ಶಕ್ತಿ ತುಂಬಬೇಕೆಂಬುದು ಗೊತ್ತಿದೆ ಎಂದ ಅವರು, ರಾಜ್ಯದ ಸಿಎಂ ಭೇಟಿ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ. ನನ್ನ ಬಗ್ಗೆ ಭಜನೆ ಮಾಡಿದಷ್ಟೂ, ಹೆಚ್ಚು ಮಾತನಾಡಿದಷ್ಟೂ ನಾನು ಬಲಾಢ್ಯನಾಗಿ ಬೆಳೆಯುತ್ತೇನೆ ಎಂದು ಹೇಳಿದ್ದಾರೆ.
ಜಿಟಿಡಿಗೆ ಎಚ್ಡಿಕೆ ಎಚ್ಚರಿಕೆ:
ಇನ್ನು ಮಾಜಿ ಸಚಿವ ಜಿಟಿ ದೇವೇಗೌಡರ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ‘ಪಕ್ಷ ಬಿಡುವವರನ್ನು ಯಾರೂ ಹಿಡಿದಿಟ್ಟುಕೊಳ್ಳಲಾಗದು. ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ನಿಮ್ಮ ರಾಜಕೀಯ ಜೀವನ ನೋಡಿಕೊಳ್ಳಲು ನಿಮ್ಮ ದಾರಿ ನೋಡಿಕೊಳ್ಳಿ’ ಎಂದು ಟಾಂಗ್ ನೀಡಿದ್ದಾರೆ. ‘ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಪಾಪ ಎಲ್ಲಾದರೂ ಒಂದು ಕಡೆ ನೀನು ಚೆನ್ನಾಗಿ ಇರು. ಆದರೆ ಪದೇ ಪದೇ ಸುಮ್ಮನೆ ನೀನು ನನ್ನ ಬಗ್ಗೆ ಚರ್ಚೆ ಮಾಡಬೇಡ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಜಿ.ಟಿ ದೇವೇಗೌಡ ಅವರಿಗೆ ಎಚ್ಚರಿಕೆ ನೀಡಿದ್ದಾರೆ.