ಬೆಂಗಳೂರು: ಬಿಜೆಪಿ,ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದ ಅನುಭವವನ್ನು ಮತ್ತೆ ನೆನೆಪು ಮಾಡಿಕೊಂಡಿದ್ದು, ಸಮ್ಮಿಶ್ರ ಸರ್ಕಾರಗಳಲ್ಲಿ ನಾನು ಪಟ್ಟ ಹಿಂಸೆ ನನಗೆ ಗೊತ್ತು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಎರಡು ಸಮ್ಮಿಶ್ರ ಸರ್ಕಾರಗಳಲ್ಲೂ ಅಭಿವೃದ್ಧಿಗೆ ಅವಕಾಶ ಸಿಗಲಿಲ್ಲ. ಚುನಾವಣೆಗೆ ಮುನ್ನ ೧೫ ಲಕ್ಷ ಮನೆ ಕಟ್ಟಿಸಿಕೊಡುವ ಭರವಸೆ ಕಾಂಗ್ರೆಸ್ ನೀಡಿತ್ತು. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಮನೆ ಕಟ್ಟಲು ಹಣ ನೀಡಲಾಗಿಲ್ಲ. ನಾನು ಬಿಜೆಪಿ ಹಾಗು ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿದ್ದೆ ಆ ಅವಧಿಯಲ್ಲಿ ಪಟ್ಟ ಕಷ್ಟ ನನಗೆ ಗೊತ್ತು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ.
ನಾನು ಸಿಎಂ ಆಗಿದ್ದು ಜನರ ದುಡ್ಡು ಲೂಟಿ ಮಾಡಲು ಅಲ್ಲ. ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ಕಮಿಷನ್ ಸರ್ಕಾರ ಅಂತಾರೆ. ನನ್ನ ಸರ್ಕಾರಕ್ಕೆ ಯಾವನಾದರೂ ಹಾಗೆ ಹೇಳಿದ್ದಾನ? ಎಂದು ಪ್ರಶ್ನಿಸಿದ್ದಾರೆ.
ಕರೋನ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆಗಳು ನಡೆಯುತ್ತಿಲ್ಲ. ಆದರೂ ಶಾಲೆಗಳಿಂದ ಶುಲ್ಕ ವಸೂಲಿ ನಿಂತಿದೆಯಾ? ಬಿಜೆಪಿ, ಕಾಂಗ್ರೆಸ್ ನಿಂದ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿತ್ತಿವೆ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಅಭಿವೃದ್ಧಿಯ ದುರದೃಷ್ಟಿಯಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.