ಚಾಮರಾಜನಗರ: ಮಹದೇಶ್ವರ ಬೆಟ್ಟಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರವನ್ನು ₹1 ಹೆಚ್ಚಿಸಲಾಗಿದೆ. ದೇಗುಲ ಅಭಿವೃದ್ಧಿ ಪ್ರಾಧಿಕಾರವು ಕೊಳ್ಳೇಗಾಲ & ಪಾಲಾರ್ ಗೇಟ್‌ಗಳ ಮೂಲಕ ಬೆಟ್ಟಕ್ಕೆ ಬರುವ ಎಲ್ಲ ಬಸ್‌ಗಳಿಗೆ ಪ್ರತಿ ಟ್ರಿಪ್‌ಗೆ ₹50 ಪ್ರವೇಶ ದರ ವಿಧಿಸುತ್ತಿದೆ. ಇದರಿಂದ ಪ್ರತಿಯೊಬ್ಬ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ₹1 ವಸೂಲು ಮಾಡುವಂತೆ ಕೆಎಸ್‌ಆರ್‌ಟಿಸಿ ಸೂಚನೆ ನೀಡಿದ್ದು, ಅದರಂತೆ ನಿರ್ವಾಹಕರು ಟಿಕೆಟ್ ದರವನ್ನು ₹1 ಹೆಚ್ಚಿಗೆ ಪಡೆಯುತ್ತಿದ್ದಾರೆ.
ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ದೇವರ ಸೇವೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚೀಲದಲ್ಲಿ ಕೋಳಿ ಹಿಡಿದುಕೊಂಡು ಪ್ರಯಾಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಸ್ ಕಂಡಕ್ಟರ್ ಪ್ರಯಾಣಿಕನಿಗೂ, ಕೋಳಿಗೂ ಫುಲ್ ಚಾರ್ಜ್ ಟಿಕೆಟ್ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಭಾಗೀಯ ಸಂಚಲನಾ ಅಧಿಕಾರಿ ಮುರಳೀಧರ್, ಬಸ್ಸಿನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪಕ್ಷಿ, ಪ್ರಾಣಿ ಒಯ್ಯುವಂತಿಲ್ಲ. 1 ಕೋಳಿಗೆ ಒಬ್ಬ ಪ್ರಯಾಣಿಕನಷ್ಟೇ ದರವನ್ನು ನಿಗದಿಪಡಿಸಬೇಕೆಂಬ ನಿಯಮವಿದೆ ಎಂದು ಹೇಳಿದ್ದಾರೆ.