ಬೆಂಗಳೂರು: ಈ ವರ್ಷ ಕೆ ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಿಬ್ಬಂದಿಗಳಿಗೆ ದೀಪಾವಳಿ ಹಬ್ಬದ ಸಂಭ್ರಮವಿಲ್ಲದಂತಾಗಿದೆ. ಹೌದು 14 ದಿನ ಕಳೆದರು ಕೆ ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಇಲಾಖೆ ಸಿಬ್ಬಂದಿಗಳಿಗೆ ವೇತನವನ್ನೇ ನೀಡಿಲ್ಲ.
ಕೆ ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಇಲಾಖೆಯಲ್ಲಿ ಪ್ರತಿ ತಿಂಗಳಿ 1 ನೇ ತಾರೀಕು ಕಚೇರಿ ಸಿಬ್ಬಂದಿಗೆ ಸಂಬಳವಾಗುತ್ತಿತ್ತು. 4 ನೇ ತಾರೀಕು ಡಿಪೋದಲ್ಲಿರುವ ಸಿಬ್ಬಂದಿಗೆ ಸಂಬಳ ಆಗುತ್ತಿತ್ತು ಮತ್ತು 7 ರಂದು ಚಾಲಕರು, ನಿರ್ವಾಹಕರಿಗೆ ಸಂಬಳವಾಗುತ್ತಿತ್ತು. ಆದರೆ ಈ ಬಾರಿ 14 ದಿನ ಕಳೆದರು ಸಿಬ್ಬಂದಿಗಳಿಗೆ ಇನ್ನು ಸಂಬಳವಾಗಿಲ್ಲ. ಕೆ ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಯಲ್ಲಿ 1.26 ಲಕ್ಷ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.
ಇಷ್ಟು ದಿನ ಕೋವಿಡ್ ಹಿನ್ನಲೆಯಲ್ಲಿ ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳಿಗೆ ಸಂಬಳವಾಗುತ್ತಿರಲಿಲ್ಲ. ಈ ಬಾರಿ ದೀಪಾವಳಿ ಹಬ್ಬ ಹಿನ್ನಲೆಯಲ್ಲಿ ಸಿಬ್ಬಂದಿಗಳು ಸಂಬಳ ನಿರೀಕ್ಷೆಯಲ್ಲಿದ್ದರು. ಆದರೆ ಈವರೆಗೂ ಸಂಬಳ ಆಗದ ಹಿನ್ನಲೆ ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಸಿಬ್ಬಂದಿಗಳಿಗೆ ದೀಪಾವಳಿ ಹಬ್ಬದ ಸಂಭ್ರಮವಿಲ್ಲದಂತಾಗಿದೆ.
ಇದನ್ನು ಓದಿ: 18ನೇ ವಯಸ್ಸಿನಲ್ಲಿದ್ದಾಗ ಆ ಬಾಬಾನಿಂದ ಲೈಂಗಿಕ ಕಿರುಕುಳ; ಆಧ್ಯಾತ್ಮಿಕ ಗುರುವಿನ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ?