Krishna janmashtami | ಶ್ರೀಕೃಷ್ಣ ಜನ್ಮಾಷ್ಟಮಿ ಯಾವಾಗ? ಸರ್ಕಾರಿ ರಜೆ ಆ.15 ಅಥವಾ 16?

Krishna janmashtami : ಶ್ರೀಕೃಷ್ಣ ಜನ್ಮಾಷ್ಟಮಿ (Krishna janmashtami) ಹಿಂದೂಗಳಿಗೆ ಒ೦ದು ಪ್ರಮುಖ ಹಬ್ಬ. ಈ ಹಬ್ಬವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ೦ದು ಆಚರಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಯಾವಾಗ? ಆಗಸ್ಟ್…

Krishna janmashtami

Krishna janmashtami : ಶ್ರೀಕೃಷ್ಣ ಜನ್ಮಾಷ್ಟಮಿ (Krishna janmashtami) ಹಿಂದೂಗಳಿಗೆ ಒ೦ದು ಪ್ರಮುಖ ಹಬ್ಬ. ಈ ಹಬ್ಬವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ೦ದು ಆಚರಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಯಾವಾಗ? ಆಗಸ್ಟ್ 15ಕ್ಕೆ ಹಬ್ಬ ಆಚರಿಸಬೇಕೇ ಅಥವಾ 16ಕ್ಕೆ ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ತಡರಾತ್ರಿಯಿಂದ ಜನ್ಮಾಷ್ಟಮಿ ಆರಂಭ

Krishna janmashtami

ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆ ಇರುವುದರಿಂದ ಜನ್ಮಾಷ್ಟಮಿ ದಿನಾ೦ಕದ ಬಗ್ಗೆ ಜನರಲ್ಲಿ ಗೊಂದಲವಿತ್ತು. ಇದೀಗ, ಸರ್ಕಾರಿ ರಜೆ, ಪೂಜಾ ಸಮಯ & ಆಚರಣೆಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಕೃಷ್ಣನ ಭಕ್ತರು ಆಗಸ್ಟ್ 15ರ ತಡರಾತ್ರಿಯಿಂದಲೇ ಹಬ್ಬದ ತಯಾರಿಗಳನ್ನು ಪ್ರಾರ೦ಭಿಸಬಹುದು. ಆಗಸ್ಟ್ 16 ರ ಮಧ್ಯರಾತ್ರಿಯ ವೇಳೆಗೆ ಪೂಜಾ ಕಾರ್ಯಗಳಲ್ಲಿ ಭಾಗವಹಿಸಬಹುದು.

Vijayaprabha Mobile App free

ಸರ್ಕಾರಿ ರಜೆ ಯಾವಾಗ?

ಕೃಷ್ಣ ಜನ್ಮಾಷ್ಟಮಿ ಹಬ್ಬವು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯನ್ನು ಆಧರಿಸಿದೆ. ಈ ವರ್ಷ ಅಷ್ಟಮಿ ತಿಥಿಯು ಆಗಸ್ಟ್ 15 ರಂದು ರಾತ್ರಿ 11.49 ಗಂಟಗೆ ಪ್ರಾರಂಭವಾಗಿ, ಆಗಸ್ಟ್ 16 ರಂದು ರಾತ್ರಿ 9.34 ಗಂಟೆಗೆ ಕೊನೆಗೊಳ್ಳುತ್ತದೆ. ಶ್ರೀಕೃಷ್ಣನ ಜನನವು ಮಧ್ಯರಾತ್ರಿಯಲ್ಲಿ ಸ೦ಭವಿಸಿದೆ ಎ೦ದು ನಂಬಲಾಗಿದೆ. ಆದರೆ, ಮುಖ್ಯ ಸಾರ್ವಜನಿಕ ಆಚರಣೆಗಳು, ದೇವಾಲಯದ ಉತ್ಸವಗಳು & ಅಧಿಕೃತ ರಜೆ ಆಗಸ್ಟ್ 16 ರಂದು ಇದೆ.

ಜನ್ಮಾಷ್ಟಮಿ ಶುಭ ಮುಹೂರ್ತಗಳು

  • ಜನ್ಮಾಷ್ಟಮಿ ರಜೆ ಶನಿವಾರ, ಆಗಸ್ಟ್ 16, 2025
  • ಅಷ್ಟಮಿ ತಿಥಿ ಪ್ರಾರಂಭ ಆಗಸ್ಟ್ 15 ರಾತ್ರಿ 11.49 ಗಂಟೆಗೆ
  • ಅಷ್ಟಮಿ ತಿಥಿ ಅಂತ್ಯ ಆಗಸ್ಟ್ 16 ರಾತ್ರಿ 9.34 ಗಂಟೆಗೆ
  • ಕೃಷ್ಣನ ಜನ್ಮ ಮುಹೂರ್ತ ಆಗಸ್ಟ್ 17, ಮಧ್ಯರಾತ್ರಿ 12.25-12.47
  • ಉಪವಾಸ ಮುರಿಯುವ ಸಮಯ ಆಗಸ್ಟ್ 16 ರಾತ್ರಿ 9.34 ಗಂಟೆಯ ನಂತರ

ಭಗವಾನ್ ವಿಷ್ಣುವಿನ 8ನೇ ಅವತಾರ

ಶ್ರೀಕೃಷ್ಣನು ಜನಿಸಿದ್ದು ಮಧ್ಯರಾತ್ರಿ ಭಗವಾನ್ ವಿಷ್ಣುವಿನ ಎ೦ಟನೇ ಅವತಾರವಾದ ಶ್ರೀಕೃಷ್ಣನ ಜನ್ಮದಿನವನ್ನು ಗುರುತಿಸುವ ಈ ಹಬ್ಬವು ಲಕ್ಷಾಂತರ ಭಕ್ತರನ್ನು ಒಟ್ಟುಗೂಡಿಸುತ್ತದೆ. ಭಕ್ತರು ಭಜನೆಗಳನ್ನು ಹಾಡುತ್ತಾರೆ, ಉಪವಾಸ ಮಾಡುತ್ತಾರೆ, ದೇವಾಲಯಗಳನ್ನು ಅಲಂಕರಿಸುತ್ತಾರೆ. ವಿಶೇಷವಾಗಿ ಮಥುರಾ, ಬೃಂದಾವನ, ದ್ವಾರಕಾ ಮತ್ತು ಪುರಿಗಳಲ್ಲಿ ಈ ಹಬ್ಬವು ವೈಭವದಿಂದ ಕೂಡಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.