ಅಬುದಾಬಿ: ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶೇಖ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 10 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
168 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದೊಂದಿಗೆ 157 ರನ್ ಗಳಿಸಿ 10 ರನ್ ಗಳಿಂದ ಸೋಲಿಗೆ ಶರಣಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ, ಡುಪ್ಲೆಸಿಸ್-17, ಶೇನ್ ವ್ಯಾಟ್ಸನ್-50, ರಾಯುಡು -30, ಜಡೇಜಾ-21, ಹಾಗೂ ಸ್ಯಾಮ್ ಕರಣ್-17 ರನ್ ಗಳಿಸಿದರು. ಕೊಲ್ಕತ್ತಾ ಪರ, ಶಿವಂ ಮಾವಿ, ಸುನಿಲ್ ನರೇನ್, ನಾಗರಕೋಟಿ, ಚಕ್ರವರ್ತಿ, ಹಾಗೂ ರಸೆಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದ ರಾಹುಲ್ ತ್ರಿಪಾಠಿ-81, ಗಿಲ್-11, ಸುನಿಲ್ ನರೇನ್-17, ಪ್ಯಾಟ್ ಕಮಿನ್ಸ್-17, ಹಾಗೂ ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಚೆನ್ನೈ ಪರ, ಡ್ವೇನ್ ಬ್ರಾವೊ 3, ಶಾರ್ದುಲ್ ಠಾಕೂರ್, ಕರಣ್ ಶರ್ಮಾ, ಹಾಗೂ ಸ್ಯಾಮ್ ಕರಣ್ ತಲಾ 2 ವಿಕೆಟ್ ಪಡೆದರು.
ಕೊಲ್ಕತ್ತಾ ತಂಡದ ಪರ ಏಕಾಂಗಿ ಹೋರಾಟ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ರಾಹುಲ್ ತ್ರಿಪಾಠಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಶುಭ ಸುದ್ದಿ ನೀಡಿದ WHO; ವರ್ಷದ ಅಂತ್ಯದ ವೇಳೆಗೆ ಕರೋನಾ ಲಸಿಕೆ…?