ದುಬೈ: ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 43ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಿಂಗ್ಸ್ ಇಲೆವೆನ್ ತಂಡ 12 ರನ್ ಗಳ ರೋಚಕ ಜಯ ಸಾಧಿಸಿದೆ.
ಪಂಜಾಬ್ ಕಿಂಗ್ಸ್ ಇಲೆವೆನ್ ನೀಡಿದ್ದ 127 ರನ್‍ಗಳ ಸಾದಾರಣ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19.5 ಓವರ್ ಗಳಲ್ಲಿ ತನ್ನೆಲ್ಲಾ 10 ವಿಕೆಟ್ ಕಳೆದುಕೊಂಡು ಕೇವಲ 114 ರನ್ ಗಳಿಸಿ 12 ರನ್ ಗಳ ಸೋಲು ಅನುಭವಿಸಿತು. ಸನ್ ರೈಸರ್ಸ್ ಪರ ಜಾನಿ ಬೈರ್ಸ್ಟ್ರೋ(18), ನಾಯಕ ಡೇವಿಡ್ ವಾರ್ನರ್ (35), ಮನೀಶ್ ಪಾಂಡೆ(15), ವಿಜಯ್ ಶಂಕರ್ (26) ರನ್ ಗಳುಸಿದರು. ಪಂಜಾಬ್ ಪರ ಕ್ರಿಸ್ ಜೋರ್ಡನ್, ಅರ್ಶದೀಪ್ ತಲಾ 3 ವಿಕೆಟ್, ಮಹಮದ್ ಶಮಿ, ರವಿ ಬಿಶ್ನೋಯ್ ಹಾಗು ಮುರುಗನ್ ಅಶ್ವಿನ್ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭಿಕ ಆಟಗಾರ ನಾಯಕ ಕೆ ಎಲ್ ರಾಹುಲ್ (27), ಮಂದೀಪ್ ಸಿಂಗ್ (17), ಕ್ರಿಸ್ ಗೇಲ್(20) ನಿಕೊಲಸ್ ಪೂರನ್ (32*) ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತು. ಸನ್ ರೈಸರ್ಸ್ ಹೈದರಾಬಾದ್ ಪರ, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ ಹಾಗು ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕ್ರಿಸ್ ಜೋರ್ಡನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.