ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಸಂಪೂರ್ಣ ಕಾಗದರಹಿತವಾಗಿತ್ತು. ಬಜೆಟ್ ವೇಳೆ ವಿಪಕ್ಷ ಸದಸ್ಯರು ಗದ್ದಲವನ್ನುಂಟು ಮಾಡಿದರು. ಈ ಮಧ್ಯೆ ತಮ್ಮ ಬಜೆಟ್ ಮಂಡನೆಯನ್ನು ಮುಂದುವರೆಸಿದ ಹಣಕಾಸು ಸಚಿವೆ ಸುಮಾರು 1 ಗಂಟೆ 33 ನಿಮಿಷಗಳವರೆಗೆ ಪ್ರಸ್ತುತ ಸಾಲಿಗೆ ಒಟ್ಟು 139.45 ಲಕ್ಷ ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ.
ಈ ಬಾರಿಯ ಬಜೆಟ್ ನ 7 ಮೂಲಾಧಾರಗಳು:-
1. ಪಿಎಂ ಗತಿಶಕ್ತಿ
2. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ
3. ಉತ್ಪಾದಕತೆಯ ವೃದ್ಧಿ
4. ಅವಕಾಶಗಳ ಹೆಚ್ಚಳ
5. ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ
6. ಪರಿಸರ ಸಂರಕ್ಷಣೆ.
7. ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು
ಮೂಲಸೌಕರ್ಯ:-
- 2023ರ ಒಳಗೆ 18 ಲಕ್ಷ ಮನೆ ನಿರ್ಮಾಣ ಗುರಿ
- 2022-23ರಲ್ಲಿ 80 ಲಕ್ಷ ಮನೆ ನಿರ್ಮಾಣ ಪೂರ್ಣ
- ಮನೆ ನಿರ್ಮಾಣಕ್ಕೆ 148 ಸಾವಿರ ಕೋಟಿ ಅನುದಾನ
- ಹೈಡೋ ಸೋಲಾರ್ ಯೋಜನೆಗೆ 1400 ಕೋಟಿ
- ‘ಹರ್ ಘರ್ ನಲ್ ಜಲ್’ ಯೋಜನೆಗೆ 60 ಸಾವಿರ ಕೋಟಿ
- 3.8 ಕೋಟಿ ಮನಗಳಿಗೆ ನೀರಿನ ವ್ಯವಸ್ಥೆ
- ಗಡಿ ಪ್ರದೇಶಗಳ ಗ್ರಾಮಗಳ ಮೂಲಸೌಕರ್ಯಕ್ಕೆ ಆರ್ಥಿಕ ನೆರವು
- ಗ್ರೀನ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಉತ್ತೇಜನಕ್ಕೆ ಯೋಜನೆ
- ಕೇಂದ್ರದಲ್ಲಿ ಯೋಜನೆಗಳ ನಿರ್ವಹಣೆಗಾಗಿ ಇ-ಬಿಲ್ ವ್ಯವಸ್ಥೆ
- ಕಾಗದ ರಹಿತ ಪ್ರಕ್ರಿಯೆಗೆ ಇ-ಬಿಲ್ ಸ್ಟ್ರೀಮ್ ಜಾರಿ
ಬಜೆಟ್ ನ ಪ್ರಮುಖ ಅಂಶಗಳು:-
- 2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆ
- ಮುಂದಿನ 25 ವರ್ಷಗಳಿಗೆ ನೀಲಿನಕ್ಷೆ ಸಿದ್ಧ
- ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಭಿವೃದ್ಧಿಯತ್ತ ಗಮನ
- ದೇಶದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ
- ಡಿಜಿಟಲ್ ರೂಪಾಯಿ ಜಾರಿಗೆ
- ಪ್ರಸ್ತುತ ಬಜೆಟ್ನಲ್ಲಿ ಬಂಡವಾಳ ವೆಚ್ಚದಲ್ಲಿ 35.4% ಹೆಚ್ಚಳ
- ಜಿಡಿಪಿಯ 2.9%ರಷ್ಟು ಮೊತ್ತ ಬಂಡವಾಳ ವೆಚ್ಚಕ್ಕೆ ಮೀಸಲು
- ಕೇಂದ್ರ & ರಾಜ್ಯ ನೌಕರರಿಗೆ ಟಿಡಿಎಸ್ 10ರಿಂದ 14ಕ್ಕೆ ಏರಿಕ
- ಬೆಂಗಳೂರಿನ ನಿಮ್ಹಾನ್ಸ್ ನೇತೃತ್ವದಲ್ಲಿ ರಾಷ್ಟ್ರೀಯ ಮೆಂಟಲ್ ಟೆಲಿ ಹಬ್ ಯೋಜನೆ ಘೋಷಣೆ
- ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ
ಶಿಕ್ಷಣ:
- ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಅಭಿವೃದ್ಧಿ
- 1-12ನೇ ತರಗತಿ ವಿದ್ಯಾರ್ಥಿಗಳಿಗೆ ‘ಒನ್ ಕ್ಲಾಸ್ ಒನ್ ಟಿವಿ ಚಾನಲ್
- ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು
- 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ
- ಅಂಗನವಾಡಿಗಳಿಗೆ ಆಡಿಯೊ-ವಿಡಿಯೊ ವ್ಯವಸ್ಥೆ
ಕೃಷಿ:-
- ರೈತರಿಗಾಗಿ ‘ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಯೋಜನೆ
- 2023 ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ
- ಖಾದ್ಯ ತೈಲ ಆಮದು ಕಡಿಮೆ ಮಾಡಲು ಪ್ರೋತ್ಸಾಹ
- ಭೂ ದಾಖಲೆಗಳ ಡಿಜಿಟಲೀಕರಣ
- ಬೆಳೆ ಮೌಲ್ಯಮಾಪನಕ್ಕೆ ಕಿಸಾನ್ ಡ್ರೋನ್ ಬಳಕೆ
- ರಾಸಾಯನಿಕ ಮುಕ್ತ ಸಹಜ ಕೃಷಿಗೆ ಹೆಚ್ಚು ಒತ್ತು
- ಎಣ್ಣೆಕಾಳುಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಯೋಜನೆ
- ಪರಿಶಿಷ್ಟ ಜಾತಿ & ಪರಿಶಿಷ್ಟ ವರ್ಗದ ರೈತರಿಗೆ ಸಹಕಾರ
- ಅರಣ್ಯ ಕೃಷಿ ಮಾಡುವವರಿಗೆ ಆರ್ಥಿಕ ನೆರವು
ತೆರಿಗೆ:
- ಸದ್ಯದ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
- ಯಾವುದೇ ಹೊಸ ನೆಸ್ ಅಥವಾ ಸರ್ಚಾರ್ಜ್ ಸೇರಿಸಲಾಗಿಲ್ಲ
- ರಾಜ್ಯ, ಕೇಂದ್ರ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು 10% ರಿಂದ 14%ಕ್ಕೆ ಹೆಚ್ಚಳ
- ಪಾಲಿಶ್ ಮಾಡಿದ ವಜ್ರ, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕ 5%ಕ್ಕೆ ಇಳಿಕೆ
- ಸಹಕಾರ ಸಂಘಗಳ ತೆರಿಗೆ ದರ 15%ಕ್ಕೆ ಇಳಿಕ
- ಡಿಜಿಟಲ್ ಆಸ್ತಿ ವರ್ಗಾವಣೆ ಮೇಲೆ 30% ತೆರಿಗೆ
- ಕ್ರಿಪ್ಪೋಕರೆನ್ಸಿ ಆದಾಯಕ್ಕೆ 30%ರಷ್ಟು ತೆರಿಗೆ
- ಕಾರ್ಪೊರೇಟ್ ತೆರಿಗೆ 18%ರಿಂದ 15%ಕ್ಕೆ ಇಳಿಕೆ
ಕೇಂದ್ರ ಬಜೆಟ್ ನಲ್ಲಿ ಇಲಾಖಾವಾರು ಹಂಚಿಕೆ
- ರೈಲ್ವೆ ಇಲಾಖೆ: 14,367.13 ಕೋಟಿ
- ಗೃಹ ಇಲಾಖೆ: 1,85,776.55 ಕೋಟಿ
- ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆ: 1,99,107.71 ಕೋಟಿ
- ಆಹಾರ & ನಾಗರಿಕ ಪೂರೈಕೆ: 2,17,684.46
- ರಕ್ಷಣಾ ಇಲಾಖೆ: 5,25,166.15 ಕೋಟಿ
- ಸಾರ್ವಜನಿಕ ಸಂಪರ್ಕ ಇಲಾಖೆ: 1,05,406.82 ಕೋಟಿ
- ರಾಸಾಯನಿಕ & ರಸಗೊಬ್ಬರ ಇಲಾಖೆ: 1,07,715.38
- ಕೃಷಿ ಇಲಾಖೆ: 1,32,513.62 ಕೋಟಿ
- ಗ್ರಾಮೀಣಾಭಿವೃದ್ಧಿ ಇಲಾಖೆ: 1,38,213.63 ಕೋಟಿ
ಸಾರಿಗೆ ಮತ್ತು ಸಂಪರ್ಕ:
- ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
- ಈ ವರ್ಷ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ
- 300 ಕಿಮೀ ಮೆಟ್ರೋ ರೈಲು ಯೋಜನೆಗೆ ಅನುಮೋದನೆ
- 400 ವಂದೇ ಭಾರತ್ ರೈಲುಗಳ ಘೋಷಣೆ
- ನಾಲ್ಕು ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪನೆ
- ನಾರಿಗೆ ಮೂಲಭೂತ ಸೌಕರ್ಯಕ್ಕೆ 120 ಸಾವಿರ ಕೋಟಿ
- 3 ವರ್ಷದಲ್ಲಿ 100 ಕಾರ್ಗೋ ಟರ್ಮಿನಲ್ ನಿರ್ಮಾಣ
- ಸರಕು-ಸಾಗಾಣಿಕೆಗೆ ಎಲೆಕ್ನಿಕ್ ವಾಹನ ಬಳಕೆಗೆ
- ಎಲೆಕ್ನಿಕ್ ವಾಹನ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ