ಒಂದು ಭಾಗದಲ್ಲಿ ಅತಿ ಹೆಚ್ಚು ಮಳೆಯಾದರೆ ಮತ್ತೊಂದು ಭಾಗ ಸದಾ ಬರಗಾಲದ ಛಾಯೆಯಲ್ಲಿರುತ್ತದೆ. ಈ ಅಸಮತೋಲನವನ್ನು ಹೋಗಲಾಡಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ‘ನದಿ ಜೋಡಣೆ ಯೋಜನೆ’.
ನದಿಗಳನ್ನು ಕಾಲುವೆ ಮತ್ತು ಜಲಾಶಯಗಳ ಮೂಲಕ ಮತ್ತೊಂದು ಭಾಗದ ನದಿಗಳ ಜತೆ ಜೋಡಿಸುವ ಮೂಲಕ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಅತಿರೇಕ ಎನಿಸುವ ಪರಿಣಾಮವನ್ನು ತಗ್ಗಿಸುವುದೇ ನದಿ ಜೋಡಣೆ ಯೋಜನೆಯ ಮುಖ್ಯ ಉದ್ದೇಶ.
ಕಾವೇರಿ – ಪೆನ್ನಾರ್ ನದಿ ಜೋಡಣೆ; ರಾಜ್ಯಕ್ಕೆ ಏನು ಲಾಭ?:
ಇನ್ನು, ರಾಜ್ಯದ ಕಾವೇರಿ ನದಿಯನ್ನು ಪೆನ್ನಾರ್ ನದಿಯೊಂದಿಗೆ ಜೋಡಿಸಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಪೆನ್ನಾರ್ ನದಿಗೆ ಬೇರೊಂದು ನದಿಯನ್ನು ಜೋಡಿಸಲಾಗುತ್ತದೆ. ಅಲ್ಲಿಂದ ಬರುವ ನೀರು ಸ್ಟೀಲ್ ಕೊಳವೆ ಮಾರ್ಗದ ಮೂಲಕವೇ ಹರಿದುಬರುವುದರಿಂದ ನೀರು ಆವಿಯಾಗುವುದಿಲ್ಲ.
ಇದರಿಂದ ಕಾವೇರಿ ನದಿಗೆ ಹೆಚ್ಚುವರಿ 100 ಟಿಎಂಸಿ ನೀರು ಸೇರಲಿದ್ದು,ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ಜಗಳವೂ ತಪ್ಪಲಿದೆ.ಅಷ್ಟೇ ಅಲ್ಲದೆ, ಮುಖ್ಯವಾಗಿ ಕೋಲಾರ, ಬಂಗಾರಪೇಟೆ, ಮಾಲೂರಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.