ಕಾರ್ತಿಕ ಮಾಸ: ಮುಂಜಾನೆ ಈ ಸಮಯದಲ್ಲೇ ಏದ್ದರೇ ಲಕ್ಷ್ಮಿ-ನಾರಾಯಣರ ಕೃಪೆ

Kartika masa | ಹಿ೦ದೂ ಧರ್ಮದಲ್ಲಿ ಕಾರ್ತಿಕ ಮಾಸವು ಅತ್ಯಂತ ಪವಿತ್ರ ಹಾಗೂ ಮಹತ್ವದ ಮಾಸವಾಗಿದೆ. ಈ ಅವಧಿಯನ್ನು ‘ವಿಷ್ಣುವಿನ ಮಾಸ’ ಎ೦ದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ವಿಷ್ಣು & ಲಕ್ಷ್ಮಿ ದೇವಿಯ ಆರಾಧನೆ…

Kartika masa Lakshmi Narayana

Kartika masa | ಹಿ೦ದೂ ಧರ್ಮದಲ್ಲಿ ಕಾರ್ತಿಕ ಮಾಸವು ಅತ್ಯಂತ ಪವಿತ್ರ ಹಾಗೂ ಮಹತ್ವದ ಮಾಸವಾಗಿದೆ. ಈ ಅವಧಿಯನ್ನು ‘ವಿಷ್ಣುವಿನ ಮಾಸ’ ಎ೦ದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ವಿಷ್ಣು & ಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಆ ಇಬ್ಬರ ಆಶೀರ್ವಾದ ಸಿಗುತ್ತದೆ ಎ೦ದು ಶಾಸ್ತ್ರಗಳು ಹೇಳುತ್ತವೆ. 2025ರ ಕಾರ್ತಿಕ ಮಾಸ ಈಗ ಆರಂಭವಾಗಿದ್ದು, ಈ ಸಮಯದಲ್ಲಿ ನಿರ್ದಿಷ್ಟ ಕಾರ್ಯಗಳನ್ನು ಮಾಡಿದರೆ ಜೀವನದಲ್ಲಿ ಸಮೃದ್ಧಿ, ಶಾಂತಿ & ಭಕ್ತಿ ಹೆಚ್ಚಾಗುತ್ತದೆ ಎ೦ದು ನ೦ಬಲಾಗಿದೆ.

ಬ್ರಹ್ಮ ಮುಹೂರ್ತದಲ್ಲಿ ಏಳಿರಿ

ಕಾರ್ತಿಕ ಮಾಸದ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ, ಅ೦ದರೆ ಸೂರ್ಯೋದಯಕ್ಕೂ ಮುಂಚೆ ಏಳುವುದು ಅತ್ಯಂತ ಮಹತ್ವದ್ದು. ಎದ್ದು ಶುದ್ಧ ಸ್ನಾನ ಮಾಡಿ, ದಾಮೋದರ ಅಷ್ಟಕವನ್ನು ಶ್ರದ್ಧೆಯಿಂದ ಪಠಿಸಬೇಕು. ಬಳಿಕ ವಿಷ್ಣು ನಾಮಸ್ಮರಣೆ ಮಾಡಿ, ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಬೇಕು. ಇಂತಹ ಪ್ರಾತಃಕಾಲಿನ ದಿನಚರಿ ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಾಂತಿ ನೀಡುತ್ತದೆ ಹಾಗೂ ಲಕ್ಷ್ಮಿ-ನಾರಾಯಣರ ಕೃಪೆ ಲಭಿಸುತ್ತದೆ.

ವಿಷ್ಣುವಿನ ಮಂತ್ರಪಠಣ

ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ಕಾಲ ವಿಷ್ಣುವಿನ ಮಂತ್ರ, ಸ್ತೋತ್ರ ಅಥವಾ ಕೀರ್ತನೆಗಳನ್ನು ಪಠಿಸುವುದು ಅತ್ಯಂತ ಶ್ರೇಯಸ್ಕರ. ವಿಷ್ಣು ಅಥವಾ ಆತನ ಅವತಾರಗಳ ಕೀರ್ತನೆಗಳಲ್ಲಿ ಮನಸ್ಸು ತೊಡಗಿಸಿದರೆ ದೈವಿಕ ಶಕ್ತಿ ನಿಮ್ಮ ಜೀವನದಲ್ಲಿ ಬೆಳಕಿನಂತಾಗುತ್ತದೆ. ಸಾಧ್ಯವಾದರೆ ವೃಂದಾವನ ಧಾಮ ಅಥವಾ ವಿಷ್ಣು ದೇವಾಲಯದಲ್ಲಿ ದರ್ಶನ ಪಡೆಯುವುದು ಶುಭಕರ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

Vijayaprabha Mobile App free

ತುಳಸಿ ಪೂಜೆ

ತುಳಸಿ ವಿಷ್ಣುವಿಗೆ ಅತಿ ಪ್ರಿಯವಾದ ಸಸ್ಯ. ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ. ಪ್ರತಿದಿನ ತುಳಸಿ ಗಿಡದ ಮು೦ದೆ ದೀಪ ಹಚ್ಚಿ, ಆರತಿಯನ್ನು ಮಾಡಿ ಮತ್ತು 4 ಬಾರಿ ಪ್ರದಕ್ಷಿಣೆ ಹಾಕುವುದು ಅತ್ಯಂತ ಪವಿತ್ರ ಕೃತ್ಯವಾಗಿದೆ. ತುಳಸಿ ಗಿಡದ ಆರಾಧನೆ ದಾ೦ಪತ್ಯ ಮತ್ತು ಧನಸಮೃದ್ಧಿ ತರುವುದಾಗಿ ನಂಬಲಾಗಿದೆ.

ದೇವರ ದರ್ಶನ

ಕಾರ್ತಿಕ ಮಾಸದ ಪ್ರತಿದಿನ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದು ಅತ್ಯಂತ ಶುಭಕರ. ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಿಲ್ಲದಿದ್ದರೆ ಆತನ ಯಾವುದೇ ಅವತಾರದ ದೇವಾಲಯಕ್ಕೆ ಭೇಟಿ ನೀಡಬಹುದು. ದೇವರ ಮು೦ದೆ ದೀಪ ಹಚ್ಚಿ, ಭಕ್ತಿ ಭಾವದಿಂದ ಪ್ರಾರ್ಥನೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ಮನೋಬಲ ದೊರೆಯುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.