School Admission 2026: ನೀವು ನಿಮ್ಮ ಮಗುವನ್ನು ಈ ಬಾರಿ ಶಾಲೆಗೆ ಸೇರಿಸುವ ಯೋಚನೆಯಲ್ಲಿದ್ದರೆ, ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಕಟ್ಟುನಿಟ್ಟಿನ ಆದೇಶವನ್ನು ನೀವು ಓದಲೇಬೇಕು.
2026-27ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಗೆ (School Admission) ಕನಿಷ್ಠ ವಯೋಮಿತಿಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: PM RAHAT Scheme: ಇನ್ಮುಂದೆ ರಸ್ತೆ ಅಪಘಾತವಾದರೆ 1 ರೂಪಾಯಿ ಖರ್ಚಿಲ್ಲ! 1.5 ಲಕ್ಷದವರೆಗೂ ಉಚಿತ ಚಿಕಿತ್ಸೆ
ಯಾವ ತರಗತಿಗೆ ಎಷ್ಟು ವಯಸ್ಸಾಗಿರಬೇಕು? (Age Limit Details)

ಮಕ್ಕಳ ಮೇಲೆ ಕಲಿಕೆಯ ಒತ್ತಡ ಕಡಿಮೆ ಮಾಡಲು ಮತ್ತು ಶಿಕ್ಷಣ ಹಕ್ಕು ಕಾಯ್ದೆಯಡಿ (RTE) ಗುಣಮಟ್ಟದ ಶಿಕ್ಷಣ ನೀಡಲು ಈ ಕೆಳಗಿನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:
LKG ಪ್ರವೇಶಕ್ಕೆ: ಕನಿಷ್ಠ 4 ವರ್ಷ ಪೂರ್ಣಗೊಂಡಿರಬೇಕು.
UKG ಪ್ರವೇಶಕ್ಕೆ: ಕನಿಷ್ಠ 5 ವರ್ಷ ಪೂರ್ಣಗೊಂಡಿರಬೇಕು.
1ನೇ ತರಗತಿಗೆ (1st Standard): ಕನಿಷ್ಠ 6 ವರ್ಷ ಪೂರ್ಣಗೊಂಡಿರಬೇಕು.
ಇದನ್ನೂ ಓದಿ: PM Kisan 22nd Installment: ಕಾಯುವಿಕೆ ಅಂತ್ಯ! ಈ ದಿನ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ
ವಯಸ್ಸನ್ನು ಲೆಕ್ಕ ಹಾಕುವುದು ಹೇಗೆ? (Cut-off Date)
ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ, ಮೇಲಿನ ವಯೋಮಿತಿಯನ್ನು ಜೂನ್ 1, 2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತಿದ್ದು, ಜೂನ್ 1ರ ಒಳಗೆ ಮಗುವಿಗೆ ನಿಗದಿತ ವಯಸ್ಸು (ಉದಾಹರಣೆಗೆ 1ನೇ ತರಗತಿಗೆ 6 ವರ್ಷ) ಕಡ್ಡಾಯವಾಗಿ ತುಂಬಿರಲೇಬೇಕು.
2022ರಲ್ಲೇ ಈ ಬಗ್ಗೆ ಆದೇಶವಿದ್ದರೂ, ಯಾವ ವರ್ಷದಿಂದ ಜಾರಿ ಎಂಬ ಬಗ್ಗೆ ಗೊಂದಲವಿತ್ತು. ಆದರೆ, ಇದೀಗ 2026ರ ಶೈಕ್ಷಣಿಕ ವರ್ಷದಿಂದಲೇ ಇದನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲಾ ಶಾಲೆಗಳಿಗೂ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರೇ ಎಚ್ಚರ: ನಾಳೆ, ನಾಡಿದ್ದು ಸರ್ಕಾರಿ ಬಸ್ ಸಿಗೋದು ಡೌಟ್!? ಊರಿಗೆ ಹೋಗುವ ಮುನ್ನ ಈ ಸುದ್ದಿ ಓದಿ




